Monday, November 21, 2011

ನಾನು ನವಚೇತನ, ನನ್ನೆಸರು ನವೋದಯ

ನನ್ನ ಸ್ಕೂಲ್ ಶುರುವಾಗಿ ೨೫ ವರ್ಷ ಆಯ್ತಂತೆ...ಎಲ್ಲರು ಜೋರು ಜೋರಾಗಿ ಸಂಭ್ರಮಿಸುವಾಗ ನಾ ಯಾಕೆ ದೂರ ಇದೀನಿ ಗೊತ್ತಾಗ್ತಾ ಇಲ್ಲ...ಆದರು ಪಟ್ ಅಂತ ನನ್ನ ಸ್ಕೂಲ್ ದಿನಗಳ recap .

ಅರ್ಪಣೆ : ನನ್ನ ಬದುಕಿಗೆ ಕನಸು ತುಂಬಿಕೊಟ್ಟ ನವೋದಯದ ದಿನಗಳಿಗೆ ಮತ್ತು 13th batchನ ಎಲ್ಲ ಸೂಪರ್ talented ತಲೆಗಳಿಗೆ

Entrance Exam
ಏನೇನು ತಿಳಿಯದ,ಅಪ್ಪ-ಅಮ್ಮ, ಆಟ ಅಷ್ಟೇ ಇದ್ದ ದಿನಗಳಲ್ಲಿ ಒಂದು ಅಪ್ಲಿಕೇಶನ್ ಫಾರಂ ಅಪ್ಪ ತಂದಾಗ ಏನೇನು ಅರ್ಥ ಆಗದ ನಾನು ತುಂಬ ಖುಷಿ ಪಟ್ಟಿದ್ದೆ.. ಅಂಗಡಿಗೆ ಹೋಗಿ ಬುಕ್ ತಂದು, ಹೆಡ್ ಮಿಸ್ ಹತ್ರ ಮಾತಾಡಿ ಅಪ್ಲಿಕೇಶನ್ ಹಾಕಿದ ಮೇಲೆ... ಇನ್ನು ಓದಬೇಕು ashte ಆದರೆ ಆಟದಲ್ಲಿ ಓದಲಿಕ್ಕೆ ಆಗಬೇಕಲ್ಲ exam ೧ ವಾರ ಮೊದಲು ಅಮ್ಮ ಬೈದು ಬುಕ್ ತೆಗಿಸಿ ಓದು ಅಂತ ಕೂತಾಗ ಸಿಟ್ಟು ಮಾಡಿಕೊಂಡು ಓದಿದಾಯ್ತು .. exam ದಿನ ಬೆಳಗ್ಗೆನೇ ಎದ್ದು ಹೋಗಿ exam ಬರಿವಾಗ ಏನೇನು tension ಇರಲಿಲ್ಲ ಒಂಥರಾ ಆಟದ ಥರ ಹಳೆ ಸ್ಚೂಲಿನ ಫ್ರೆಂಡ್ಸ್ ಗೆಲ್ಲ ಮುಖ ತೋರಿಸಿ ಬಂದ ಹಾಗೆ

ಅಂತು ಬಂತು result
ಎಂದಿನಂತೆ ಸ್ಕೂಲ್ ಬಿಟ್ಟ ಮೇಲೆ ರಸ್ತೆಯಲ್ಲಿ ಶೂ ಬಿಚ್ಚಿ, ಕಲ್ಲು ತುಂಬಿಸಿಕೊಂಡು,ತಂಗಿನ ಓಡಿಸ್ಕೊಂಡು ಮನೆಗೆ ಬಂದ್ರೆ ಆಫೀಸ್ಇಂದ ಬೇಗ ಬಂದಿದ್ದ ಅಪ್ಪ ಫುಲ್ ಖುಷಿಯಲ್ಲಿದ್ರು, ಅಮ್ಮ ಅಧ್ಯಕೋ ಮೌನದೇವತೆ ಥರ ಕುಳಿತಿದ್ದರು ಆಮೇಲೆ ತಿಳೀತು ನಾನು ಯಾವತ್ತೋ ಬರೆದ ಬೇರೆ ಸ್ಕೂಲ್ ಅದ್ಮಿಸ್ಸಿಒನ್ ಎಕ್ಷಮ ಅಲ್ಲಿ ನಾನು ಪಾಸ್... ಮುಂದೆ ಎಲ್ಲರಿಗು ಟೆನ್ಶನ್ ಆ ಸ್ಕೂಲ್ Residential school ಅಂತೆ, ತುಂಬ ಒಳ್ಳೆ ಸ್ಕೂಲ್ ಅಂತೆ, ಅವಕಾಶ ಸಿಗೋದೆ ಕಷ್ಟ ಅಂತೆ, ನಾನು ಮನೆ ಬಿಟ್ಟು ಸ್ಕೂಲ್ ಅಲ್ಲೇ ಇರಬೇಕು, ಊಟ ತಿಂಡಿ ನಿದ್ದೆ ಎಲ್ಲ ಅಲ್ಲೇ... ಆಗ ಶುರುವಾಯ್ತು ಭಯ.... ನನ್ನ ಪುಟ್ಟ ಪ್ರಪಂಚ, ಮನೆ, ನನ್ನ ಸ್ಕೂಲ್, ಫ್ರೆಂಡ್ಸ್( ಸುಧಾ, ಚಂದ್ರಮತಿ, ರೋಹಿಣಿ) ಎಲ್ಲ ಬಿಟ್ಟು ದೂರ ಹೋಗ್ಬೇಕು....

Admission
ಅಂತು admission ದಿನ ಅಪ್ಪ-ಅಮ್ಮನ ಜೊತೆ ಹೋದಾಗ, ನಾನು ಮೊದಲು ನೋಡಿದ್ದು ವಿಭಾ ಮತ್ತೆ ನನ್ನ parents ತರಾನೆ tension ಅಲ್ಲಿ ಇಂದ ಅವಳ parents.... ಅದೇನೋ ಲಿಸ್ಟ್ ಅಲ್ಲಿ ನಂದು ೧೧ನೇ ಹೆಸರು... ಆಫೀಸ್ ಇಂದ ನನ್ನ ಹೆಸರು ಕರೆದಾಗ ಓಳಗೆ ಹೋಗಿ ಅವ್ರು ಕೇಳಿದ ಮೊದಲ ಪ್ರಶ್ನೆ ೧ ರೂಪಾಯಿಯಲ್ಲಿ ಎಷ್ಟು ಪೈಸೆ??? ೧೦೦ :) ಯಾವೊದೋ ಪದ್ಯ Rose is Red, Violet is Blue... ಇನ್ನು ೧೫ ದಿನ ಬಿಟ್ಟು ಟ್ರಂಕು, ಬಟ್ಟೆ-ಬರೆ, ಬಕೀಟು ಎಲ್ಲದರ ಸಮೇತ ಬರಬೇಕು....ಸಂಜೆ ಸಿಕ್ಕ ಗುಂಗರು ಕೂದಲ ಹುಡುಗಿ ನನ್ನ ಅಕ್ಕ-ಅಣ್ಣ ಇಬ್ರು ಇಲ್ಲೇ ಒಧ್ತಿದಾರೆ ಇಗ ನಾನು admission ಆಗ್ತಿದೀನಿ ಅಂತ ನಗ್ತಾ ಹೇಳಿದ _______(guess it :) )

ಮೊದಲ ದಿನ..
ಆ ದಿನ ನನ್ನ ಹೊಸ ಟ್ರಂಕು, ರೆಡ್ ಬಕೀಟು, ಬೆಡ್ ಶೀಟ್, ನನ್ನ ಹೊಸ ಸ್ಕೂಲ್ ಬ್ಯಾಗ್ ಜೊತೆ ಸ್ಚೂಲ್ನತ್ತ ಪಯಣ... dormetry ಎಂಬ ಪದ ಅದೇ ಮೊದಲ ಸಲ ಕೇಳಿ ಗಾಬರಿಯಾಗಿ ಹೋಗಿ ನೋಡಿದ್ರೆ, ಖಾಲಿ ಕಾಟ್ ಗಳಿದ್ದ ಖಾಲಿ ಹಾಲ್, ನನಗಿಂತ ಮೊದಲೇ ಬಂದಿದ್ದ ಕೆಲವು ಹುಡುಗಿಯರು (ರಚಿತ,ಸ್ವಾತಿ,ಅನಿತಾ) ಅವರ ಪಕ್ಕ ನನ್ನ ಕಾಟ್.... ಆಮೇಲೆ ನಿದಾನವಾಗಿ ಎಲ್ಲ ಬರಲಿಕ್ಕೆ ಶುರು ಮಾಡಿದ್ರು, ಸಂಜೆ ವೇಳೆಗೆ ಬೆಡ್, ತಟ್ಟೆ, ಬ್ಲಾಂಕೆಟ್ ಸಿಕ್ಕಿದ್ದು ಆಯಿತು ಆಮೇಲೆ ಅಮ್ಮ ಅಳುತ್ತ next week ಬಂದ್ಬಿಡ್ತೀನಿ ಅಂತ ಮುದ್ದು ಮಾಡಿದ್ದು,ಅಪ್ಪ ಗಟ್ಟಿಯಾಗಿ ತಬ್ಕೊಂಡಿದ್ದು ನನ್ನ partner ಅನುಶ ಅಕ್ಕಂಗೆ ನೂರು ಸಾರಿ ಜೋಪಾನವಾಗಿ ನೋಡ್ಕೊಮ್ಮ ಅಂದು ಅವರು ಹೋರಾಟ ಮೇಲೆ ಒಂಥರಾ ನೋವು... ಅದು ನೋವು ಅಂತನು ಗೊತ್ತಗಾದ ದಿನಗಳು ಅವು...yup!!!! ಸಂಜೆ ನಾನು ಅನಿತಾ ಪಿಳಿ ಪಿಳಿ ನೋಡ್ತಾ ಇದ್ದ ಹಾಗೆ ಜಗಳ (ಚಾಂದಿನಿ parents ಮತ್ತೆ ಶ್ರುತಿ parents ಕಾಟ್ ವಿಷಯಕ್ಕೆ) ಅಳು ತಡೆಯಲಾರದೆ ಬೆಡ್ ಮೇಲೆ ಮಲಗಿ ಬಿಕ್ಕಿ ಬಿಕ್ಕಿ ಅತ್ತಿದ್ದು ಆಯಿತು...ರಾತ್ರಿ ಊಟ, ಆಮೇಲೆ ಎಲ್ಲ ಸೇರಿ ಆಟ ಆಡಿ, ೪ ಕಾಟ್ ಜೋಡಿಸಿ ಮಲಗಿದ್ದು ಆಯಿತು

ಒಂಟಿತನದ ಮೊದಲ ಅನುಭವ..
ಬೆಳಗ್ಗೆ ಜಾಗಿಂಗ್ ಹೋಗ್ಬೇಕು ಅಂತ ಭಯದಲ್ಲಿ ನಿದ್ದೆಯೇ ಬರದೆ ಹೊರಳಡುವಾಗ ಮಳೆ so, no jogging yippie:) :) ನಂತರ ನಡೆದದ್ದು ಒಂದು ಸವಿ ನೆನಪೇ ಅನ್ಬೇಕು...ಮೊದಲ prayer ಹಾಲ್ ಆಮೇಲೆ ಲೈನ್ ಆಗಿ ಬೇಲಿ ಆಚೆ ಸ್ಕೂಲ್ಗೆ ನಡೆದು ಹೋಗಿದ್ದು, ಮತ್ತೆ ತಿಂಡಿ, ಮತ್ತೆ ಕ್ಲಾಸ್, ಮತ್ತೆ ಊಟ, ಮಧ್ಯಾನ ಸ್ಟಡಿ, snacks, ಆಟ ಮತ್ತೆ ಸ್ಟಡಿ ಆಮೇಲೆ ಊಟ ನಿದ್ದೆ...ಒಂದೇ ಸ್ಕೂಲ್ ಇಂದ ಬಂದ ಫ್ರೆಂಡ್ಸ್ ಇದ್ರೂ ಚಾಂದಿನಿ-ಸೌಮ್ಯ( Always Together), ರಚಿತ-ಸ್ವಾತಿ,ಶ್ರುತಿ-ವಿಂಧ್ಯ( More close), ಅರ್ಪಿತ-ಚೈತ್ರ,ವಿನುತ, ಲಿಲ್ ಗ್ಯಾಂಗ್ ವಿಭಾ-ವಿಂಧ್ಯ, always crying ಚಂದನ,ಅದಾಗಲೇ english ಅಲ್ಲಿ ಮಾತಾಡುತಿದ್ದ ಶ್ರೀದೇವಿ (who all still remember her first leadership), ಕೊನೆ ಕಾಟಿನ ನಂದಿತಾ, ಶುಭ-ಕಾವ್ಯ,ಆಶಾ-ಉಷಾ, ಭವ್ಯ, ಆಶಾ ಅಕ್ಕ( ಅಪ್ಪನ ಪರಿಚಯದವರ ಮಗಳು), Partner ಅನುಷಾ ಅಕ್ಕ, seniors ಜ್ಯೋತಿ ಅಕ್ಕ, ಸೌಮ್ಯ ಅಕ್ಕ, Not to forget ಅರ್ಚನ ಅಕ್ಕ(Still i have sort of respect fa her i donno y??) ಹುಡುಗರ ಮುಖ, ಯಾಕೆ ಹೆಸರು ನೆನಪಾಗುತ್ತಿಲ್ಲ....ooooophs ಎಲ್ಲರು ಇದ್ರೂ ಅಪ್ಪ-ಅಮ್ಮ ಜೊತೆ ಇರದ ಒಂಟಿತನ ಮೊದಲ ಅನುಭವ....ನಿಮ್ಮದು??

೫ ರ ಜೋಗ್ಗಿಂಗ್:
ನನ್ನ ಸ್ಕೂಲ್ ಲೈಫ್ನ ಸುಂದರ ನೆನಪುಗಳಲ್ಲಿ ಇದು ಒಂದು... ಬೆಳಗ್ಗೆ ಎದ್ದು ಬ್ರುಶ್ ಮಾಡಿ, ಇಲ್ಲ ಮಾಡದೆ ground ಹೋಗಿ ನಿದ್ದೆ ಕಣ್ಣಿನಲ್ಲಿ ವಂದೇ ಮಾತರಂ ಹಾಡಿ ಕುದುರೆಗಳ ಥರ ಓಡುತಿದಿದ್ದು.. ಹಾಗೆ ಯೋಚಿಸಿ ಸ್ಕೂಲ್ನ ಅಷ್ಟು ಜನ ೧೦೪೦ ಜನ ಓಡುತಿದ್ರೆ, ಇಡಿ ಮಾವಿನಕೆರೆ ಹೇಗೆ ಅಲುಗಾಡಿರಬೇಕು ಅಲ್ಲವ???(good morning fa mavinakere wid our jogging) ಟುಕು ಟುಕು ಟುಕು ಟುಕು ಓಟ... :) :) :) ಶೋಭನ ಮೇಡಂನ ಬೈಕೊಂಡು ಬೈಕೊಂಡು ಯದ್ವಾ-ತದ್ವ ಓಡುತಿದ್ದ ನಮ್ಮ ಜೋಗ್ಗಿಂಗ್ ಈಗ ಆಫೀಸ್ ಹೋಗಿ-ಬರುವ ಓಟದ ಥರ ಬದಲಾಗಿದೆ ಅಂದ್ರೆ :( :(

Rules ಬೇಲಿಯೊಳಗೆ ಬಂದಿ
ನಮ್ಮ ನವೋದಯ super fishy rules
೧. ಹುಡುಗರ ಜೊತೆ ಮಾತನಾಡಬಾರದು ( :) :D ನಾನು ಯಾರನ್ನು ಮಾತಡಿಸಿಲ್ಲಪ್ಪ :P )
೨. Jeans not allowed for ಗರ್ಲ್ಸ್ (
೩. ಮಂಡಿ ಮೇಲೆ ಇರುವ frock not allowed ( Gals!!! leaders!!! how u used to check it :):))
೪.ಸಂಜೆ ೬ರ ಮೇಲೆ ಸ್ಮೃತಿ ವನ ಬಂದ್ (ದೆವ್ವ ಇದೆಯಂತೆ ಹೌದಾಆ??? :) )
೫. juniors seniors bath room ಬಳಸಬಾರದು( 6th ಅವರಿಗೆ ಒಂದೇ :( )
೬. ಬಟ್ಟೆ ಒಗಿಯುವ ಕಲ್ಲು reservation
೭.Parents dormetry ಒಳಗೆ ಬರುವ ಆಗಿಲ್ಲ
8. ಪ್ರತಿ ವಾರ ನಡೆಯುವ meeting alli complaints ಗಳನ್ನೂ ಹೇಳುವುದು ( ನನಗೆ idu ಬಹಳ ಭಯ ತರಿಸುತಿದ್ದ ವಿಷಯ, ಯಾಕೆಂದರೆ ಕೆಲವೊಮ್ಮೆ ಹೆಸರೇ ಹೇಳದೆ ಬೈದುಬಿಡುತಿದ್ದರು ಯಾರೋ ಹೀಗೆ ಮಾಡುತ್ತಿದ್ದಿರ ಮಾಡಬೇಡಿ, ನನ್ನ ಭಯ, ಅದು ನಾನಾ?? :) :) )
೯.ಇನ್ನು ನೆನಪಿಲ್ಲ ,ನಿಮಗೆ ನೆನಪಿದ್ರೆ ಕಾಮೆಂಟ್ ಮಾಡಿ ಆಯ್ತಾ??

dining hallನಲ್ಲಿ ನಮ್ಮ study hours,ಪವರ್ ಇಲ್ಲದ ರಾತ್ರಿ ಮತ್ತು ಸೂಪರ್ ಶ್ರುತಿಯವರ fitting ಗುಂಡಿ :)

Sunday, November 20, 2011

ಮಾತಿಗೆ ಅರ್ಥವಿಲ್ಲ

ಪ್ರೀತಿಯ ಪಪ್ಪಾ,

ನಿನಗೆ ನನ್ನ ಈ ಪತ್ರ ಎಂದಿಗೂ ತಲುಪುವುದೇ ಇಲ್ಲ ಎಂಬ ನೋವಿನೊಂದಿಗೆ,

ಚಿಕ್ಕವಳಿದ್ದಾಗ ನಾನು-ನೀನು ಸಂಜೆ ವಾಕಿಂಗ್ ಹೋಗುವಾಗ ನಿನ್ನ ಬಾಯಲ್ಲಿ ಅವೇ ಸಾಲುಗಳು
Talkers were talking,
The talk of the beginning and the end,
But, I do not talk of the beginning or the end.

( ಈವತ್ತಿಗೂ ಇದು ಎಲ್ಲಿಯ ಸಾಲುಗಳು ತಿಳಿದಿಲ್ಲ, ತಿಳಿದುಕೊಳ್ಳುವ ಯಾವ ಪ್ರಯತ್ನವನ್ನು ಮಾಡಿಲ್ಲ)
ಈ ಸಾಲುಗಳಿಗೆ ಅರ್ಥವಿರಬಹುದು ಅಂತನು ನಂಗೆ ಅನಿಸಲ್ಲ ಆದರೆ ನೀನಿರದ ಈ ದಿನಗಳಲ್ಲಿ ಇವು ಕಾಡುತ್ತವೆ
ನನ್ನ ಬಾಲ್ಯವನ್ನು ಅದೆಷ್ಟು ರಿಚ್ ಮಾಡಿಸಿದ್ದೆ ನೀನು, ಓದುವಷ್ಟು ಕಥೆ ಪುಸ್ತಕಗಳು, ದೊಡ್ಡ ಬಯಲು,ಸ್ವತಂತ್ರ
ಹುತ್ತದೊಳಗೆ ಹಾವಿನ ಮರಿ,ಊತಿಕ್ಯತದ ಮೊಟ್ಟೆ, ಆಕಾಶದ ಕೆಳಗೆ ಮಲಗಿ nee ಹೇಳಿದ ರಾಮಾಯಣ, ಮಹಾಭಾರತದ ಕಥೆ, ಅಜ್ಜಿ ಊರಿಗೆ ಈಜಲು ಕಲಿಯಲು ಹೋಗಿದ್ದು ಪ್ರತಿ ಬೇಸಿಗೆ ರಜೆಯಲ್ಲೂ ಚಿಕ್ಕಪ್ಪನ ಮನೇಲಿ ಸೈಕಲ್ ಕಲಿಯುವ ಸರ್ಕಸ್ ಮಾಡಿದ್ದು , ಪ್ರತಿ ಸಾರಿ ರಜ ಕಳೆದ ಮೇಲೆ ಪೆನ್ಸಿಲ್ಲಿನ್ ಇಂಜೆಕ್ಷನ ಹಾಕಿಸಲಿಕ್ಕೆ ಕರೆದುಕೊಂಡು ಹೋಗಿದ್ದು,ಹಠ ಮಾಡುವಾಗ ರೂಮ್ನಲ್ಲಿ ಕೂಡಿ ಹಾಕಿ ಹೊಡೆದಿದ್ದು, tnt ಯಲ್ಲಿ ಮಕ್ಕಳ ಸಿನಿಮಾ ತೋರಿಸಿದ್ದು, ಸುಳ್ಳು ಜ್ವರ ಬರಿಸಿಕೊಂಡು ಸ್ಕೂಲ್ ಹೋಗದೆ ಇದ್ದಾಗ ಹೆಚ್ಚೇ ಮುದ್ದು ಮಾಡಿದ್ದು. ಕನಸು-ಕಣ್ಣಿರು-ಕನವರಿಕೆಯಲ್ಲೇ ಕಳೆದ ಆ ದಿನಗಳು ಕನಸಿನ ಆಕಾಶಕ್ಕೆ ಹೋಗಿ ಸಿಕ್ಕ ಸಿಕ್ಕ ನಕ್ಷತ್ರಗಳನ್ನ ಜೇಬು ತುಂಬಿಸಿಕೊಂಡ ಥರ... ಮತ್ತೆ ಮತ್ತೆ ಕಾಡುತ್ತವೆ....

ನಗುತ್ತ, ನಗಿಸುತ್ತಾ ಇದ್ದ ನೀನು ಆಚನಕ್ಕಾಗಿ ಬಿಟ್ಟು ಹೋಧ ರಾತ್ರಿ ಯಾಕೋ ಸಮಯನೆ ನಿಂತು ಹೋದ ಹಾಗೆ, ಅಲ್ಲಿಂದ ಮುಂದೆ ನನ್ನ ಸಮಯ ಮುಂದೆ ಹೋಗ್ತಾನೆ ಇಲ್ಲ.. ನೀ ಮನೆಗೆ ಬರದೆ ನಾ ನಿದ್ದೆ ಮಾಡಿದ ನೆನಪೇ ಇಲ್ಲ, ಅಲ್ಲಿಂದ ಇಲ್ಲಿಯವರೆಗೆ ನನ್ನ ರಾತ್ರಿಗಳು ಬಹು ದೀರ್ಘ.... ಎಲ್ಲರಿಂದ, ಎಲ್ಲದರಿಂದ ದೂರ ಓಡಿಹೋಗುವ ನಾನು ಎಲ್ಲಿ ನಿಲ್ಲಬಹುದು ತಿಳಿದಿಲ್ಲ... ಜಗತ್ತು ಚಲಿಸುತ್ತಿದೆ, ನಾನು ನಿಂತಿದೇನೆ... ನೀನು ಹೇಳುವ ಹಾಗೆ ಖಾಲಿ ಯೋಚನೆಗಳು..ಆರಂಭ ಅಂತ್ಯಗಳ ನಡುವೆ ನಿಂತಿರುವ ನಾನು ಮತ್ತೂ ಖಾಲಿ...ಬದುಕಿನ ಸತ್ಯಗಳು ಅದೆಷ್ಟು ಕಹಿ, ಒಪ್ಪಿಕೊಳ್ಳಲೇಬೇಕು ಎಲ್ಲವನ್ನು.... ನಾನು ನಿನ್ನ ಮಗಳು, ಹಂಚಿಕೊಳ್ಳಬೇಕು ನಿನ್ನನ್ನು ಜಗತ್ತಿನ ಜೊತೆ ಅಂತ ನನಗೆ ತಿಳಿಯಲೇ ಇಲ್ಲ..ನೀ ನನಗೆ ಸಮೃದ್ದ ಬದುಕು ಕಟ್ಟಿಕೊಟ್ಟ ಅಪ್ಪ ಮಾತ್ರ, ನಾ ಕಂಡ ನಿನ್ನನ್ನು ಪದಗಳಲ್ಲಿ ಕಟ್ಟಲಾರೇನು...ನೀ ಸದ್ದಿಲ್ಲದೇ ಹೊರಟುಹೋದ ಮೇಲೆ ನಮ್ಮದು Ship without a captain ಆದರೆ ಜಿಂದಗಿಯ ಸಾಗರದಲ್ಲಿ ನಾವು ಬದುಕಬೇಕು so, Ship sails on...ನೀ ಜೊತೆ ಇರದ ಇ ಹೊತ್ತು ಹೊಸ ಕನಸಿಲ್ಲ, ಕನವರಿಕೆಯಿಲ್ಲ ಆದರೆ ಬದುಕಲೇ ಬೇಕು ಅನ್ನೋ ಛಲ ಇದೆ.....

ನಿನಗೆ ತಲುಪದ ಈ ಪತ್ರದಲ್ಲಿ ನಿನಗೆ ಹೇಳಲು ಮೌನ ಬಿಟ್ಟು ಬೇರೇನೂ ಇಲ್ಲ.....ನಿನ್ನವಳು,
ಭೂಮಿ

Tuesday, February 22, 2011

ಮನದ ಆಸೆಗಳಿಗೆ ರೆಕ್ಕೆ ಕಟ್ಟಿ
ಕಾದಿರುವೆ ಗೆಳೆಯ..
ಪ್ರೀತಿ ಇದ್ದರೆ ಹಾರಿಸು
ಇಲ್ಲದಿದ್ದರೆ ಮತ್ತೆ ಕಾಯುವೆ........

ಹೌದು ನೊಂದ ಮನಸಿನ ಗಾಯ
ವಾಸಿಯೇ ಆಗುವುದಿಲ್ಲ...
ನೋಯಿಸಿದ ನಾವು ಬಿಕ್ಕುತ್ತೇವೆ
ನೊಂದ ನೀವು ಮೌನದ ಹಾದಿ ಹಿಡಿಯುತ್ತಿರಾ...

ಎಲ್ಲಕ್ಕೂ ಸಮಯವೇ ಕಾರಣವಂತೆ..
ಎಲ್ಲಕ್ಕೂ ಸಮಯವೇ ಉತ್ತರವಂತೆ...
ಎಲ್ಲಕ್ಕೂ ಸಮಯವೇ ಬೇಕೆಂದರೆ
ನನ್ನ ಮನಸಿಗೆ ಸಮಯ ಅಂತ ಕರಿಯಲ.....

ಯಾರ ಮನದ ಹನಿಗಳೋ?? ನಾನು ನನ್ನದು ಅಂತೀನಿ

ಅಸಲು ಈ ಬದುಕಿಗೇನು ಅರ್ಥ...?
ಬದುಕು ಅಷ್ಟು ಸುಲಭದ ಅರ್ಥವೇ....?
ಸರಿ ಬದುಕಿಗೆ ನಾನು ಯಾರು....?
ನನ್ನ ಪಾಲಿಗೆ ಬದುಕೆಂಬುದು ಏನು....?
--------------------------------------------

ಬದುಕು ನಾನಾಡುವ ಆಟವೇ.....?
ಬದುಕು ನಾ ನೋಡುವ ನೋಟವೇ....?
ಬಂದದ್ದು ಆಡಬೇಕು, ಕಂಡದ್ದು ನೋಡಬೇಕು...
ಬದುಕು ತಾನಾಗೆ ಚಲಿಸೋ ಕಾಲದಂತೆ...

--------------------------------------------

ನನಗಿನ್ನೂ ಅದೇ ದುರಾಸೆ...
ನಾ ಬದುಕಿ ತೋರಿಸಬೇಕು...
ಇನ್ನೊಬ್ಬರ ಹೊಟ್ಟೆ ಉರಿಸುವಂತೆ...
ನನ್ನೆಡೆಗೆ ಮೆಚ್ಚುಗೆಗಳ ಹರಿಸುವಂತೆ....
----------------------------------------------------
ನಿನ್ನೆ ಮೊನ್ನೆ ಎಲ್ಲಾ ಕಳ ಕೊಂಡಿದನ್ನ
ಇಂದು ಹುಡುಕಿದರೂ ಸಿಗದೇ
ಮತ್ತೆ ನಾಳೆಯ ಮೇಲೆ ಭರವಸೆ ಇಟ್ಕೊಂಡು
ಕಾಯ್ತಾ ಕೂರ್ತಿವಲ್ಲಾ.... ಕನಸು ಅಂದ್ರೆ ಅದೇನಾ....?

Wednesday, August 4, 2010

ನೆನಪಾಗುವ ಮುನ್ನ ಮರೆತುಬಿಡು


ಕಳೆದು ಹೋಗುವ ಮುನ್ನ ಕಳೆದ ದಿನಗಳಿಗೆ ನನ್ನದೊಂದು ಪ್ರೀತಿ ಮಾತು
"ನೆನಪಾಗುವ ಮುನ್ನ ಮರೆತುಬಿಡು"
---------------------------------------------
ಮರೆಯಲಾಗದ ನೆನಪುಗಳಿಗೆ ಒಂದು ಬೇಡಿಕೆ
ಹೃದಯದಾಳದಲ್ಲಿ ಉಕ್ಕಿ ಉಕ್ಕಿ ಕುಗ್ಗಿಸಬೇಡಿ ನನ್ನತನವನ್ನು....
---------------------------------------------
ನನ್ನದಲ್ಲದ ನಿನ್ನ ನೆನಪುಗಳನ್ನ ಹೆಕ್ಕಿ ಕೊಡಲಾರೆನು ಯಾರಿಗೂ... ಯಾಕೆ ?

Tuesday, July 27, 2010

ಪುಟ್ಟ ಕಾಗದದ ದೋಣಿ ....


ಕಳೆದ ನೆನಪುಗಳಿಗೆ ಒಂದಷ್ಟು ಒಲುಮೆಯ ಕಣ್ಣಿರು ...
---------------------------------
ಎಲ್ಲೆಲ್ಲೋ ಹುಡುಕಿ ....
ಸಿಕ್ಕ ಆ ಪುಟ್ಟ ಕಂಗಳಿಗೆ
ಈ ಮುದ್ದಾದ ಮಳೆಯೇ
ಉಡುಗೊರೆ ...
---------------------------------
ಪ್ರೀತಿ ಎಂದರೆ ,
ಮತ್ತೆ ನೆನಪಾಗುವ ಮಳೆ ಮುಗಿದ ರಾತ್ರಿಯಂತೆ,
ಅಮಾವಾಸ್ಯೆಯಲ್ಲಿ ನಾನು ನೆನೆಯುವ ಚಂದ್ರನಂತೆ ...
---------------------------------
ನನ್ನೊಳಗಿನ ನಿನ್ನ ನೆನಪುಗಳಿಗೆ
ಯಾಕೋ ನೀಡಲೇ ಬೇಕಿನಿಸಿದೆ ಒಂದು ಕಾಣಿಕೆ ..
ಸಾಕಾಗದೆ ಈ ನೀಲಿ ಆಕಾಶ ,
ದೂರದ ಬೆಟ್ಟ ,ಹರಿಯುವ ನೀರು ,
ನೆನೆದಷ್ಟು ಬೀಸುವ ಗಾಳಿ...
---------------------------------
ಪ್ರೀತಿ ಧಾರೆಯೆರೆದು ನೀನು ಬರಲಾರೆಯಾ ..??
ಈ ಜೀವನಕ್ಕೆ ಒಮ್ಮೆ ..
ಬೆಳಕಲ್ಲವೇನೋ ನನ್ನೊಳಗಿನ ನಿನ್ನ ಕನಸುಗಳು
ಈ ಮನದ ಕನಸುಗಳಿಗಾದರು ಬರಲಾರೆಯಾ
...

Tuesday, July 13, 2010

ಮನ ಮಿಡಿಸಿದ ಉತ್ತರ :)


ಪ್ರೀತಿಯ ನನ್ನವನೇ ,
ಕನಸಿನ ಹಕ್ಕಿ ಹಾರದಿದ್ದರು ಹಕ್ಕಿ ನನ್ನದೇ ಎಂದೆದಿಗೂ............
ನನ್ನ ಸಾಲಿಗೆ ನಿನ್ನ ಮೊದ್ದು ಉತ್ತರ
dont worry,,
ನಿನ್ನ ಕನಸಿನ ಹಕ್ಕಿ ನನ್ನ ಹತ್ತಿರ ಬಂದಿದೆ so ನನಸಾಗತ್ತೆ ಅನ್ಕೊತಿನಿ.........
:)
ನಿಜ! ಪ್ರೀತಿ ಕಾರಣ ಪ್ರೀತಿ ಮಾತ್ರ

ನಿನ್ನ ಉಸಿರು ಉಸಿರಲು ಬೆರೆತಿರುವ,
ನಿನ್ನವಳು,
ಭೂಮಿ