Tuesday, July 13, 2010

ಒಂಟಿ ಮನದ ಒಂದಷ್ಟು ಯೋಚನೆಗಳು


ಪ್ರಿಯ moony,

ನನ್ನ ಮನದಲ್ಲಿ ನಿನ್ನ ಬಗ್ಗೆ ಇರಬಹುದು,ಅಮ್ಮನ ಬಗ್ಗೆ ಇರಬಹುದು, ನನ್ನ ಮನೆಯ ಬಗ್ಗೆ ಇರಬಹುದು.. ಇರಬಹುದಾದರೂ ಏನು? ಪ್ರೀತಿನಾ? ಹುಡುಕುತಿದ್ದೇನೆ ಮತ್ತೂ ಗುರಿ ಸಿಗದ ಹುಡುಕಾಟವಿರಬಹುದು ಇದು....
ಪ್ರೀತಿ ಅಂದ್ರೆ ಜೊತೆಗಾರರನ್ನ ಹುಡುಕುವುದಾ??
ಪ್ರೀತಿ ಅಂದ್ರೆ ಕನಸು ಕಾಣುವುದಾ??
ಪ್ರೀತಿ ಅಂದ್ರೆ ಅಪ್ಪ ಅಮ್ಮ ನಮ್ಮ ಬಗ್ಗೆ ಕಟ್ಟಿರುವ ನೂರು ಕನಸು ನನಸು ಮಾಡೋದಾ??
ಪ್ರೀತಿ ಅಂದ್ರೆ ಮತ್ತೆ ಮತ್ತೆ ಮರೆಯಲಾಗದ ನೆನಪುಗಳೊಡನೆ ಬದುಕುವುದಾ?
ಅಪ್ಪ-ಅಮ್ಮ ನಮ್ಮನ್ನು ಹೆತ್ತಿರುತ್ತಾರೆ,ಪ್ರೀತಿಸುತ್ತಾರೆ,ಗೌರವಿಸುತ್ತಾರೆ,ಬದುಕನ್ನು-ಕನಸುಗಳನ್ನು ಕಲಿಸಿಕೊಡುತ್ತಾರೆ....ನಾನು ಅವರನ್ನು ಪ್ರೀತಿಸುತ್ತೇನೆ ಹಾಗು ಅವರು ಕೂಡ ಆದ್ದರಿಂದ ಇಲ್ಲಿ ಪ್ರೀತಿಗೆ ಒಂದಷ್ಟು ಅರ್ಥಗಳು ಇರುತ್ತದೆ ಅಲ್ಲವಾ??
ಒಳ್ಳೆಯ ಬದುಕನ್ನು ಕಟ್ಟಿಕೊಡುವ ಅಪ್ಪ-ಅಮ್ಮ ಹಾಗೆಯೇ ಬದುಕು ಸವೆಸಲು ಒಳ್ಳೆಯ ಜೊತೆಗಾರನನ್ನು ಹುಡುಕಿಕೊಡುತ್ತಾರೆ ಅಲ್ಲವಾ? ಆದರು ನಾನ್ಯಾಕೆ ವೃಥಾ ಕನಸುಗಳನ್ನು ಕಟ್ಟುತ್ತೇನೆ...
ನನಸಾಗಬೇಕು ಅಂತೇನು ಕನಸು ಕಟ್ಟುತಿಲ್ಲವಲ್ಲ ಅಂತ ಮನಸಿಗೆ ಉತ್ತರ ಕೊಟ್ಟು ಮತ್ತೆ ಯೋಚಿಸುತ್ತೇನೆ ಮತ್ಯಾಕೆ ಈ ಕನಸುಗಳು??
ಉತ್ತರ ನೀನೆ ಹೇಳಬೇಕು.....

ಹುಚ್ಚು ಕನಸು ಕಾಣಬೇಕು ಅನಿಸಿತು ಈ ಒಂಟಿತನದಲ್ಲಿ ಕಂಡಿದ್ದೇನೆ ನನಸು ಮಾಡುವ ಯಾವ ಯೋಚನೆಗಳು ಇಲ್ಲದೆ..
ಕನಸಿನ ಹಕ್ಕಿ ಹಾರದಿದ್ದರು ಹಕ್ಕಿ ನನ್ನದೇ ಎಂದೆದಿಗೂ...

ನಿನ್ನವಳು,
ಭೂಮಿ

Monday, July 12, 2010

ಒಂದೆರಡು ಮಾತು...


ಪ್ರೀತಿಯ ಮೂನಿ,

ಪ್ರೀತಿ ಆಚೆ ಒಂದೆರಡು ಮಾತು .......

ಕಣ್ಣು ಮನದ ಮಾತು ಬಿಚ್ಚಿಡುತ್ತೆ ಅಂತಾರೆ... ಪ್ರತಿ ಬಾರಿ ಕನ್ನಡಿ ಮುಂದೆ ನಿಂತು ನನ್ನ ಕಣ್ಣನ್ನು ನಾನೇ ನೋಡಿ ಪ್ರಶ್ನಿಸಿಕೊತೀನಿ ನನ್ನ ಮನದ ಮಾತು ಬಿಚ್ಚಿಡುತಿವೆಯೇ ಅವು...ನನಗೆ ಅಲ್ಲಿ ಕಣ್ಣು ಬಿಟ್ಟು ಮತ್ತೇನು ಕಾಣುವುದೇ ಇಲ್ಲ ಮತ್ತೆ ಮನದ ಮಾತು ಪ್ರಶ್ನೆ ಯಾಗಿಯೇ ಉಳಿದು ಬಿಡುತ್ತದೆ.. ಅದು ನಿಜ ಯಾರ ಕಣ್ಣಲ್ಲಿ ಯಾರ ಬಗೆಗೆ ಯಾವ ಕನಸು ನಿಚ್ಚಳವಾಗಿದೆಯೋ??? ಯಾರ ಮನವು ಏನನ್ನು ಮಾತಡುತಿರುತ್ತದೆಯೋ?? ಮತ್ತೆ ಎಲ್ಲವು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.....
ಪ್ರತಿ ಸಾರಿ ಮನಸಿನ ತುಂಬ ಪ್ರಶ್ನೆಗಳನ್ನೇ ತುಂಬಿಕೊಂಡು ಉತ್ತರಕ್ಕೆ ಪರದಾಡುವ ನನ್ನ ನೋಡಿ ನಗುವ ನಿನ್ನ ಕಣ್ಣಲ್ಲಿ ನನ್ನ ಮನದ ಮಾತಿವೆ ಅನಿಸುತಿದೆ...
ಈ ಎಲ್ಲ ಪರದಾಟಕ್ಕು ಕಡಿವಾಣ ಹಾಕಿ ನನ್ನ ಮನದ ತುಂಬ ಪ್ರೀತಿ ತುಂಬಿಸಲು ಬರಬೇಕಿದೆ ನೀನು ಇನ್ನು ಹತ್ತಿರಕ್ಕೆ......
ಮತ್ತೆ ದೂರ ಇರುವ ನಿನಗೆ ಈ ಮನದ ಪರದಾಟ ಅರ್ಥವಾದರೆ ಸಾಕು.....

ಕಾದಿರುವೆ ನಿನಗಾಗಿ,ನಿನ್ನ ಮನದ ಪ್ರೀತಿಗಾಗಿ .........
missing you ....
ನಿನ್ನವಳು,
ಭೂಮಿ

Wednesday, April 14, 2010

ಮಳೆ ಮುಗಿದ ರಾತ್ರಿ- 2


ಮತ್ತೆ....
ಅವನು ಕಿ-ಹಿಡಿದು ತಬ್ಬಿದಾಗ
ಬಾಳು ಧನ್ಯವಾಯಿತೆಂದು ಸಂಭ್ರಮಿಸಿದ್ದೆ..
ನುಡಿದಿದ್ದ ಕಿವಿಯೊಳಗೆ, ನಿನ್ನಳೊಗಿನ ನಾನು
ನನ್ನೊಳಗಿನ ನೀನು ಒಂದೇ ಅಲ್ಲವೇನೇ??
ಮರೆತಿದ್ದೆ ಅವನಿಗಾಗಿ ಕಾದಿದ್ದ ದಿನಗಳ ನೆನೆಪು.....

ಬೆರೆತ್ತಿದ್ದೆವು ನನ್ನೊಳಗೆ ಅವನು, ಅವನೊಳಗೆ
ನಾನು, ಸೋತಿದ್ದೆವು ಮತ್ತೆನನ್ನೊ
ಗೆದಿದ್ದೆವು,ನಗುವಿನಲ್ಲಿ ಅತ್ತಿದ್ದೆವು....
ಅಂತೂ ಅವನೊಳಗಿನ ಭ್ರಮೆಯಲ್ಲಿ ನಾನು
ನನ್ನೊಳಗಿನ ಭ್ರಮೆಯಲ್ಲಿ ಅವನು ಸಿಹಿಯಾಗಿದ್ದೆವು..

ನಂತರ ಮತ್ತೆನಿದೆ......

ಮಳೆ ಮುಗಿದಿತ್ತು,ರಾತ್ರಿ ಆರಿತ್ತು
ನನ್ನೊಳಗೆ ಬೆಳಕಿತ್ತು,ಅವನ ನೆನಪಿತ್ತು
ಅಂವ ತಂದ ಕೊಡೆ ಮುರಿದಿತ್ತು,ನನ್ನ ಕನಸಿನ
ಕೊಡೆ ಹರಿದಿತ್ತು...
ಅಂತೂ ಮಳೆ ಮುಗಿದಿತ್ತು ರಾತ್ರಿ ಆರಿತ್ತು,ಕೊಡೆ ಹರಿದಿತ್ತು...
ಮನದೊಳಗೆ ನೆನಪು ಮಿನುಗುತ್ತಿತ್ತು........

ಮಳೆ ಮುಗಿದ ಈ ರಾತ್ರಿಗಳಲ್ಲೂ ನೆನಪಾಗುತ್ತಾನೆ
ಅವನು, ನನ್ನೊಳಗಿನ ಅದೇ ತುಂಟಾನಾಗಿ
ಅವನೊಳಗಿನ ನಾನು ಈ ರಾತ್ರಿಯ ಮಳೆ
ನನ್ನೊಳಗಿನ ಅವನು ಈ ಮಳೆ ಮುಗಿದ ರಾತ್ರಿಯ ಜೀವಂತಿಗೆ...

ಈ ಮಳೆ-ಮುಗಿದ ರಾತ್ರಿಯಲ್ಲಿ ನಾನು
ಗುನುಗುವ ಹಾಡಿನಲ್ಲಿ ಅವ
ಜೀವಂತವಾಗುತ್ತಾನೆ, ನನ್ನೊಳಗಿನ ಬೆಳಕಾಗುತ್ತಾನೆ

ಅವನಿಗಾಗಿ ಕಾದಿದ್ದ ಹಗಲ ನೆನೆಪುಗಳು ಮಾಸುತ್ತದೆ...
ಮಳೆ ಮುಗಿದ ರಾತ್ರಿಗಳಿಗೆ ಮನ ಬೇಡುತ್ತದೆ.......

ಮಳೆ ಮುಗಿದ ರಾತ್ರಿ-1


ಪ್ರತಿ ಬಾರಿ ಮಳೆ ಸುರಿದು ಮುಗಿದಾಗ ಕಾಡುತ್ತವೆ ಆ ದಿನಗಳು...
ಅಲ್ಲಾ ಮಳೆ ಮುಗಿದ ರಾತ್ರಿಗಳು.......

ಊರೆಲ್ಲಾ ರಾತ್ರಿ ಕಾಯುವ ಹೊತ್ತಿನಲ್ಲ
ಅದೋ ಆ ರಸ್ತೆ ತುದಿಯಲ್ಲೇ ಗುರುತಿಸಿದ್ದೆ
ಅವನನ್ನ, ಆ ಸೋನೆ ಮಳೆಯ ಮುಸುಕಿನಲ್ಲಿ
ಅವನು ಕೊಡೆ ಹಿಡಿದು ಬರುವಾಗ...
ನಕ್ಕಿದ್ದೆ ಅವನಿಗಾಗಿ, ಅವನ ಪುಟ್ಟ ಕಂಗಳ
ಬೆಳಕ ಕಿಡಿಗಾಗಿ.......

ನನ್ನೆದರು ಅಂವ ನಿಂತಾಗ ಕಂಪಿಸಿದ್ದೆ
ಅವನ ಉಸಿರಲ್ಲಿ ಉಸಿರು ಹಿಡಿದು...
ನನ್ನೆದೆಯ ಅವನ ನೆನಪುಗಳಲ್ಲಿ ನೆನೆದಿದ್ದೆ
ಅವನ ಮಧುರ ಮಾತುಗಳನ್ನ...
ಬರಡಾದ ಬದುಕಿನ ಭರವಸೆಯ ಹೂವುಗಳನ್ನ.........

ಅವನೊಳಾಗಿತ್ತು ನನ್ನೆದೆಯ ಹಾಡಲಾರದ
ಹಾಡುಗಳ ಪಲ್ಲವಿಯ ಸಾಲುಗಳು...
ನಾಚಿದ್ದೆ ಅವನ ಚೆಲುವ ಸ್ವರದ ಧಾಟಿಗೆ
ಬೇಡಿದ್ದೆ ನಾನು ಅವನಿಗಾಗಿ....
ಅವನೊಳಗಿನ ನನ್ನ ಹಾಡಿನ ಭಾವಗಳಿಗಾಗಿ....

ಮಳೆ ಸುರಿಯುತ್ತಲ್ಲೇ ಇತ್ತು,ತಲುಪಿದ್ದೆವು ನಾವು ನಮ್ಮ
ಮನದ ಗೂಡಿಗೆ......

ಹಾಡು


Dear moony,

ನನ್ನ ಚೆಂಗುಲಾಬಿಯಾ ಪುಟ್ಟ ಚೆಲುವ ನೀನು...
ನನ್ನ ಮನದೊಳಗಿನ ಹೇಳಲಾರದ ಹಾಡಿನ ಸಾಲುಗಳು ನೀನು...

ಏನೋ??
ನನ್ನದೆಯ ರಾಗಗಳಿಗೆ ಪದ ತುಂಬಿ ಹಾಡಾಗಲಾರೆಯಾ??
ನಿಜ...
ನಿನ್ನ ೧ ಮಾತು... ನಾನು ಜೀವಮಾನ ಪೂರ ಹಾಡುವ ಅದೆಷ್ಟೊ ಹಾಡಿನ ಅಥ್ರ....

ಈ ಮನಕ್ಕೆ ಹಾಡುವುದೇ ಮರೆತು ಹೋಗುವ ಮುನ್ನ ನನ್ನ ಕೈ ಹಿಡಿದು ಜೀವನ ಪೂತ್ರಿ ಜೊತೆ ನಡೆವ ಹಾಡಿಗೆ ಪದವಾಗಲಾರೆಯಾ??

wid all d love,


ನಿನ್ನವಳು,
ಭೂಮಿ

ನಗುವ ನಿನ್ನ ಕಣ್ಣುಗಳಿಗೆ


ಪ್ರಿಯ moony

ಬರೆಯಲಿಕ್ಕೇನೂ ಇಲ್ವೋ...ಸತ್ಯ ಈ ಮನಸ್ಸಿನ ತುಂಬಾ ಪ್ರೀತಿಬಿಟ್ಟೆನೂ ಇಲ್ಲ...hope u don wan nythng mre dn dat....i ve so much 2 tell u...ನಾ ಯಾವಾಗ್ಲೂ ಮಲಗಿಯೂ ನಿದ್ದೆ ಬರದ ರಾತ್ರಿಗಳಲ್ಲಿ ಭಯಾನಕ ಕನಸು ಕಟ್ಟಿದ್ದೀನಿ...ಕನಸಲ್ಲೇ impossibleನೆಲ್ಲಾ possible ಮಾಡೋ ನಿನ್ನ ಭೂಮಿ ಅಲ್ಲಾ ನಾನು...ಸದ್ದೇ ಆಗದೆ ನಿನ್ನ ನೆನೆದ ರಾತ್ರಿಗಳ..ಉತ್ತರವೇ ಬರದ ನಿನ್ನೊಡನೆ ಆಡಿದ ಮಾತುಗಳು...ಕದ್ದು ಮುಚ್ಚಿ ಮೊಬ್ ಬೆಳಕಲ್ಲಿ ಪದ್ಯದ ಸಾಲು ಗೀಚಿದ್ದು...ಕಳೆದ ಹುಣ್ಣಿಮೆ ರಾತ್ರಿಗಳ ಲೆಕ್ಕ ಇಟ್ಟಿದ್ದು...ಆ ಮಳೆ ಬಂದ ರಾತ್ರಿ ಮೆಲ್ಲಗೆ ಬಾಗಿಲು ತೆಗೆದು ಹೊರಹೋಗಿ ನೆನೆದು ನೆಂದ ನೆಪವನ್ನೆಲ್ಲ ನಿನ್ನ ಮೇಲೆ ಹಾಕ್ಕಿದ್ದು...ಏ! ನಿನಗೆ ಗೊತ್ತಲ್ಲಾ ರಾತ್ರಿಯೆಲ್ಲ ನಿನಗಾಗಿ ಕನಸು ಕಟ್ಟುತ್ತಿರುತ್ತೇನೆ..ನೀನು ಎಲ್ಲದರೂ ಸಿಹಿ-ಕನಸು ಕಾಣೊ ಪುಟಾಣೀ ಮಗು ಟರಾ ತಾಚಿಮಾಡುತ್ತಿರುತ್ತಿಯಾ ಅಂತಾ...ಕಳ್ಳ! ನಗುತ್ತಿದ್ದಿಯಾ ಆ ನಿನ್ನ ಪುಟ್ಟ ಕಂಗಳಲ್ಲಿ ನಕ್ಕು ನಗದಂತೆ ಮಾಡೋ ನೀನು, ನಾನು ನಿನ್ನಷ್ಟೆ ಪ್ರೀತಿಸುವ ಚಂದಮಾಮ ತರ...ಈಗ ಬೇಡ ನನ್ನ ಚಂದಮಾಮನ ಮೇಲೆ ಕೋಪ.....

ನಿಜ....
ನಾನು ಸದ್ದೆ ಆಗದೆ ಗುನುಗುವ ಅದೆಷ್ಟೋ ಹಾಡುಗಳ ಭಾವ ನಿನ್ನಲ್ಲವೆನೊ???
ಈ ಬೆಳಕು ಸರಿದು ಕತ್ತಲಾಗುವ ಮುನ್ನ ಈ ಪುಟ್ಟಾ ಮನದ ಗೂಡಿನ ಗುಬ್ಬಚ್ಚಿಮರಿ ಆಗುತ್ತಿಯಾ ಅಲ್ಲೆನೊ??
ನನ್ನ ಜೀವ ಮಿಡಿತದ ಸದ್ದು ಮುಗಿಯುವ ಮುನ್ನ ನಿನ್ನ ಕನಸೆಲ್ಲವನ್ನು ನನಗೆ ಕೊಟ್ಟು ನನಸು ಮಾಡೇ ಅಂತಾ ಕೇಳತ್ತಿಯಾ ಅಲ್ಲೆನೊ???

ಮತ್ತೆ ಮತ್ತೆ ನಿನ್ನೆಸರು ಕರೆಯುತ್ತಲೇ ಇರಬೇಕು ಅನಿಸ್ತ್ತಿದೆ...ಹುಮ್... ಹಾಗೆ ನಮ್ಮ ನಾಳೆಗಳನ್ನ ಒಮ್ಮೆ ಯೋಚಿಸಿ ನೋಡಿದ್ರೆ ಪುಟ್ಟೂ ನಗುನಾ ನಾಚಿಕೆನಾ ಹುಮ್ ಎನೊ ಗೂತ್ತಿಲ್ಲಾ ಒಂತರ ಆಗೂದೊಂತು ನಿಜ...ಹಾಗೆನೇ ಒಂದು ಬಣ್ಣದ ಲೋಕದ ರಾಜ ರಾಣಿ ಆಗಿಬಿಡ್ತೀವಿ ಅಲ್ಲಾ.....ಈ ರಾತ್ರಿ ಜೊತೆ ಇdiದ್ರೆ ki ಹಿಡಿದು ಮುದ್ದುಮಾಡ್ತಿದ್ದೆ ಅಂತಾ...ಈ ಉಸಿರಲ್ಲು ಉಸಿರಾಗಿರುವ, ನನ್ನ ಮನಸಿನ ಬಣ್ಣಾವೇ ನೀನಾಗಿರುವ, ನನ್ನ ನೊರೆಂಟೂ ಮಾತುಗಳಾ ಅಥ್ರ ನೀನು... ಬೇಡಾವೆಂದರೂ ಬಿಡಾಲಾಗದ ಪದವು ನೀನು...

ನನ್ನಳೋಗಿನ ನಿನ್ನ ಕನಸುಗಳೀಗೆ ನೀಡಲೇಬೇಕಾಗಿದೆ ಒಂದು ಕಾಣಿಕೆ...
ಸಾಕಾಗದೆ ನೀಲಿ ಆಕಾಶ....ನನ್ನ ಬೆಚ್ಹನೆ ಆಪ್ಪುಗೆ....ರಾತ್ರಿಯ ಸಿಹಿ ಮುತ್ತು...
ಮತ್ತದೆ ಕನಸುಗಳು...

all d love....
BHUMI

Tuesday, February 23, 2010

ಲವ್ u


ಪ್ರಿಯ ಮೂನಿ,

ಇವತ್ತು ಆಕಾಶ ಮತ್ತಷ್ಟು ನೀಲಿಯಾಗಿದೆ. ಮಳೆ ಮುಗಿದಿದೆ ಅಲ್ಲವಾ ಅದಕ್ಕೆ ಇರಬೇಕು...ಕ್ಲಾಸ್ರೂಂ ಅಲ್ಲಿ ಕುಳಿತು ಕಿಟಕಿ ಗಾಳಿಗೆ ಕೂದಲೊಡ್ಡಿ ಅದೇ ಚಾಮುಂಡಿಬೆಟ್ಟ ನೋಡುವಾಗ ನಿನ್ನ ನೆನೆಪಾಯಿತು...ನೀನು ಉಸಿರಾಡಿ ಬಿಟ್ಟಗಾಳಿ ನನ್ನೊಳಗೆ ಸುಳಿದೊಯ್ತು ಅನ್ಸುತ್ತೆ...

ನಿಜವೇನೂ ಗೊತ್ತಾ.. ನಾನು ನಿನ್ನ ಪ್ರೀತಿಸ್ತಿದ್ದೀನಿ ಅದ್ದಕಾದರೂ ನನ್ನ ಕಣ್ಣ ಮುಂದೆ ಬಂದುಬಿಡೊ..
ನಿನಗಾಗಿ ನಾ ಕಾಯುತ್ತಿರುವ ದಿನಗಳನ್ನು ನೆನೆದರೆ ನಿನಗೆ ಬೇಜಾರು ಆಗಲ್ವಾ ನೀನು ನನಗೊಸ್ಕರ ಕಾದಿರುವೆ ಅಂತಾ ಹುಚ್ಚು ಆಸೆ ಕಣೋ...ಹುಮ್.. ಅಲ್ಲಾ ಕಣೋ ನಿನಗೆ ಈ ಜೀವನ ಸವೆಸಲು ಜೊತೆಗಾತಿ ಬೇಡವಾ?? ನಿನ್ನೆಲ್ಲಾ ಕನಸುಗಳಿಗೆ ಸ್ಪಂದಿಸುವ ಗೆಳತಿ, ನಿನ್ನ ಸ್ವಾತಂತ್ರ್ಯದಲ್ಲಿ ಬಂದಿಯಾಗುವ ಮನಸ್ಸು,ನಿನ್ನ ನಗುವಿನಲ್ಲಿ ಬೆಳಕು ಕಾಣುವ ಹಣತೆ, ನಿನ್ನೆಲ್ಲವೂ ನನ್ನದು ಎಂದು ಹೇಳುವ ಪುಟ್ಟ ಹೊಳೆವ ಕಂಗಳ ಪೋರಿ ಏನೊ ಬೇಕಾ?? ಯೋಚಿಸಿನೋಡು...

ನಿನಾಗಾಗಿ ಈ ಪುಟ್ಟ ಕಾಗದದ ದೋಣಿ ತೇಲಿ ಬಿಡುತ್ತಿದ್ದೆನೆ ಈ ಜಿಂದಗಿಯ ಸಾಗರದಲ್ಲಿ
ಆದರೆ ತೆಗೆದುಕೋ ಇಲ್ಲಾ ತೇಲಲಿ ಬಿಡು ನನ್ನೆದೆಯ ಕನಸುಗಳು..

ನಿನ್ನವಳು
ಭೂಮಿ