Sunday, November 20, 2011

ಮಾತಿಗೆ ಅರ್ಥವಿಲ್ಲ

ಪ್ರೀತಿಯ ಪಪ್ಪಾ,

ನಿನಗೆ ನನ್ನ ಈ ಪತ್ರ ಎಂದಿಗೂ ತಲುಪುವುದೇ ಇಲ್ಲ ಎಂಬ ನೋವಿನೊಂದಿಗೆ,

ಚಿಕ್ಕವಳಿದ್ದಾಗ ನಾನು-ನೀನು ಸಂಜೆ ವಾಕಿಂಗ್ ಹೋಗುವಾಗ ನಿನ್ನ ಬಾಯಲ್ಲಿ ಅವೇ ಸಾಲುಗಳು
Talkers were talking,
The talk of the beginning and the end,
But, I do not talk of the beginning or the end.

( ಈವತ್ತಿಗೂ ಇದು ಎಲ್ಲಿಯ ಸಾಲುಗಳು ತಿಳಿದಿಲ್ಲ, ತಿಳಿದುಕೊಳ್ಳುವ ಯಾವ ಪ್ರಯತ್ನವನ್ನು ಮಾಡಿಲ್ಲ)
ಈ ಸಾಲುಗಳಿಗೆ ಅರ್ಥವಿರಬಹುದು ಅಂತನು ನಂಗೆ ಅನಿಸಲ್ಲ ಆದರೆ ನೀನಿರದ ಈ ದಿನಗಳಲ್ಲಿ ಇವು ಕಾಡುತ್ತವೆ
ನನ್ನ ಬಾಲ್ಯವನ್ನು ಅದೆಷ್ಟು ರಿಚ್ ಮಾಡಿಸಿದ್ದೆ ನೀನು, ಓದುವಷ್ಟು ಕಥೆ ಪುಸ್ತಕಗಳು, ದೊಡ್ಡ ಬಯಲು,ಸ್ವತಂತ್ರ
ಹುತ್ತದೊಳಗೆ ಹಾವಿನ ಮರಿ,ಊತಿಕ್ಯತದ ಮೊಟ್ಟೆ, ಆಕಾಶದ ಕೆಳಗೆ ಮಲಗಿ nee ಹೇಳಿದ ರಾಮಾಯಣ, ಮಹಾಭಾರತದ ಕಥೆ, ಅಜ್ಜಿ ಊರಿಗೆ ಈಜಲು ಕಲಿಯಲು ಹೋಗಿದ್ದು ಪ್ರತಿ ಬೇಸಿಗೆ ರಜೆಯಲ್ಲೂ ಚಿಕ್ಕಪ್ಪನ ಮನೇಲಿ ಸೈಕಲ್ ಕಲಿಯುವ ಸರ್ಕಸ್ ಮಾಡಿದ್ದು , ಪ್ರತಿ ಸಾರಿ ರಜ ಕಳೆದ ಮೇಲೆ ಪೆನ್ಸಿಲ್ಲಿನ್ ಇಂಜೆಕ್ಷನ ಹಾಕಿಸಲಿಕ್ಕೆ ಕರೆದುಕೊಂಡು ಹೋಗಿದ್ದು,ಹಠ ಮಾಡುವಾಗ ರೂಮ್ನಲ್ಲಿ ಕೂಡಿ ಹಾಕಿ ಹೊಡೆದಿದ್ದು, tnt ಯಲ್ಲಿ ಮಕ್ಕಳ ಸಿನಿಮಾ ತೋರಿಸಿದ್ದು, ಸುಳ್ಳು ಜ್ವರ ಬರಿಸಿಕೊಂಡು ಸ್ಕೂಲ್ ಹೋಗದೆ ಇದ್ದಾಗ ಹೆಚ್ಚೇ ಮುದ್ದು ಮಾಡಿದ್ದು. ಕನಸು-ಕಣ್ಣಿರು-ಕನವರಿಕೆಯಲ್ಲೇ ಕಳೆದ ಆ ದಿನಗಳು ಕನಸಿನ ಆಕಾಶಕ್ಕೆ ಹೋಗಿ ಸಿಕ್ಕ ಸಿಕ್ಕ ನಕ್ಷತ್ರಗಳನ್ನ ಜೇಬು ತುಂಬಿಸಿಕೊಂಡ ಥರ... ಮತ್ತೆ ಮತ್ತೆ ಕಾಡುತ್ತವೆ....

ನಗುತ್ತ, ನಗಿಸುತ್ತಾ ಇದ್ದ ನೀನು ಆಚನಕ್ಕಾಗಿ ಬಿಟ್ಟು ಹೋಧ ರಾತ್ರಿ ಯಾಕೋ ಸಮಯನೆ ನಿಂತು ಹೋದ ಹಾಗೆ, ಅಲ್ಲಿಂದ ಮುಂದೆ ನನ್ನ ಸಮಯ ಮುಂದೆ ಹೋಗ್ತಾನೆ ಇಲ್ಲ.. ನೀ ಮನೆಗೆ ಬರದೆ ನಾ ನಿದ್ದೆ ಮಾಡಿದ ನೆನಪೇ ಇಲ್ಲ, ಅಲ್ಲಿಂದ ಇಲ್ಲಿಯವರೆಗೆ ನನ್ನ ರಾತ್ರಿಗಳು ಬಹು ದೀರ್ಘ.... ಎಲ್ಲರಿಂದ, ಎಲ್ಲದರಿಂದ ದೂರ ಓಡಿಹೋಗುವ ನಾನು ಎಲ್ಲಿ ನಿಲ್ಲಬಹುದು ತಿಳಿದಿಲ್ಲ... ಜಗತ್ತು ಚಲಿಸುತ್ತಿದೆ, ನಾನು ನಿಂತಿದೇನೆ... ನೀನು ಹೇಳುವ ಹಾಗೆ ಖಾಲಿ ಯೋಚನೆಗಳು..ಆರಂಭ ಅಂತ್ಯಗಳ ನಡುವೆ ನಿಂತಿರುವ ನಾನು ಮತ್ತೂ ಖಾಲಿ...ಬದುಕಿನ ಸತ್ಯಗಳು ಅದೆಷ್ಟು ಕಹಿ, ಒಪ್ಪಿಕೊಳ್ಳಲೇಬೇಕು ಎಲ್ಲವನ್ನು.... ನಾನು ನಿನ್ನ ಮಗಳು, ಹಂಚಿಕೊಳ್ಳಬೇಕು ನಿನ್ನನ್ನು ಜಗತ್ತಿನ ಜೊತೆ ಅಂತ ನನಗೆ ತಿಳಿಯಲೇ ಇಲ್ಲ..ನೀ ನನಗೆ ಸಮೃದ್ದ ಬದುಕು ಕಟ್ಟಿಕೊಟ್ಟ ಅಪ್ಪ ಮಾತ್ರ, ನಾ ಕಂಡ ನಿನ್ನನ್ನು ಪದಗಳಲ್ಲಿ ಕಟ್ಟಲಾರೇನು...ನೀ ಸದ್ದಿಲ್ಲದೇ ಹೊರಟುಹೋದ ಮೇಲೆ ನಮ್ಮದು Ship without a captain ಆದರೆ ಜಿಂದಗಿಯ ಸಾಗರದಲ್ಲಿ ನಾವು ಬದುಕಬೇಕು so, Ship sails on...ನೀ ಜೊತೆ ಇರದ ಇ ಹೊತ್ತು ಹೊಸ ಕನಸಿಲ್ಲ, ಕನವರಿಕೆಯಿಲ್ಲ ಆದರೆ ಬದುಕಲೇ ಬೇಕು ಅನ್ನೋ ಛಲ ಇದೆ.....

ನಿನಗೆ ತಲುಪದ ಈ ಪತ್ರದಲ್ಲಿ ನಿನಗೆ ಹೇಳಲು ಮೌನ ಬಿಟ್ಟು ಬೇರೇನೂ ಇಲ್ಲ.....



ನಿನ್ನವಳು,
ಭೂಮಿ