Sunday, February 21, 2010

ಸಿಗಲಾರೆಯಾ?????


ಪ್ರೀತಿಯ MoonY

ಮತ್ತೆ ಸಿಗಲಾರೆಯಾ..
ದೂರದ ಹಸಿರು ಬೆಟ್ಟದಲ್ಲಿ ನಿನ್ನ ಕೈ ಹಿಡಿದು ನಡೆಯುತ್ತಾ
ಹಿಡಿ ಜೀವಮಾನದ ಮಾತು ಆಡಬೇಕಿದೆ...
ಮತ್ತೆ ಸಿಗಲಾರೆಯಾ..
ಹೋಗಬೇಕಿದೆ ಸೊಗಸಿನ ಬಂಗಾರದ ದಿನಗಳಿಗೆ
ನೀನು,ನಾನು, ನೆನೆದಷ್ಟು ಮಾತು ಮತ್ತೆಲ್ಲಾ ನಗು..
ಅರಳಲಿ ಮತ್ತೆ ನನ್ನ ಮನದ ಹೂವುಗಳು ನಿನ್ನ ಸಾನಿಧ್ಯದಲ್ಲಿ..
ಸಿಗಲಾರೆಯಾ???????????????


with all d love,
bhumi

ಮೌನರಾಗ


ಪ್ರಿಯ MoonY

ಮಾತುಗಳಿಗೆ ಮೋಸ ನಾನು ಮಾಡುತ್ತೇನೆ..
ಮಾಡಬೇಕಾದವುಗಳಿಗೆ ಮೋಸ ನಾನು ಮಾಡುತ್ತೇನೆ..
ಮನಸ್ಸಿನ ಮಾತುಗಳಿಗೆ ಮೋಸ ನಿನ್ನ ಹಾಗೆ ಎಂದೂ ಮಾಡಲ್ಲ..
ಇನ್ನಾದರೂ ಮನದ ಮಾತುಗಳಿಗೆ ಮೋಸ ಮಾಡಿಕೊಳ್ಳದೆ ನನ್ನ ಮುಂದೆ ಬಂದು ಬಿಡೋ...
ಹೀಗೆ ಅಡಗಿಕೊಂಡು ಇರಲ್ಲಿಕ್ಕೆ ಬೇಜಾರಾಗಲ್ವಾ..

ಇನ್ನಾದರೂ ನನ್ನ ತುಂಟ ಅಲೆಯುವ ಮನಕ್ಕೆ ನೀನೇ ಮೊದಲ ಬಾರಿ ಬಳಿಬಂದು ಬದುಕಾ ಹಾದಿ ತೋರಿಸಬಾರದೆ...
ಜೀವನವಿಡಿ ನನ್ನೆದೆಯ ಆನಂದದಲ್ಲಿ ನೀನು ಲೀನವಾಗಬಾರದೆ..

ಪ್ರೀತಿಯಿಂದ ನಿನ್ನವಳು
ಭೂಮಿ

ನಿನಗಾಗಿ


ಪ್ರಿಯ ಮೂನಿ,

ರಾತ್ರಿ ನಿದ್ದೆ ಎಂಬ ಮಾಯೆ ನನ್ನ ಕಣ್ಣಿಗೆ ಸುಳಿದೇ ಇಲ್ಲವೋ...ದಿನಾ ರಾತ್ರಿ ಹೀಗೆ..ನಿನ್ನ ಕನಸುಗಳೇ ಹೀಗಾ? ನಿದ್ದೆ ತಿನ್ನುತ್ತದಾ ಹಾಗಾದರೆ ನಿನ್ನ ಕನಸುಗಳೇ ನನ್ನ ಬಳಿ ಇರಲಿ ಕಣೋ...

ಮಲಗಿದ್ರು ಬಿಡಲ್ಲ ನಿನ್ನ ಕನಸುಗಳು ಬಂದು ನನ್ನ ಕಾಡುತ್ತೆ...ನಗುವ ನಿನ್ನ ಕಂಗಳ ಚೆಲುವು ಹೇಗಿರಬಹುದು?? ನಿತ್ಯ ನಾ ಕಾಣುವ ಕನಸುಗಳೆಷ್ಟು, ನಿದ್ದೆ ಮಾಡದ ದಿನಗಳೆಷ್ಟು...ಒಮ್ಮೊಮ್ಮೆ ಆಕಾಶದ ಮಿನುಗುವ ತಾರೆಯಾಗಿಬಿಡ್ತಿನಿ...ಒಮ್ಮೊಮ್ಮೆ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಾಗ್ತೀನಿ....ಹೇಳಲಿಕ್ಕೆ ಇರುವ ಎಷ್ಟೋ ಮಾತುಗಳು ಬಾಯಿಯವರೆಗೆ ಬಂದು ನಿಂತುಬಿಡುತ್ತವೆ...ಏನು ಮಾಡೋದು ನೀನು ನನ್ನ ಎದುರಿಗೆ ಬಂದಿಲ್ಲವಲ್ಲ..

ನಿಜಾ ಹೇಳ್ಲಾ... ಸಮಯ ಓಡುತ್ತೀರುವ ಅರಿವಿಲ್ಲದೆ ನಿನಗಾಗಿ, ನಿನ್ನ ಬಗ್ಗೆ ಕಂಡ ಕನಸುಗಳ ನೆನಪಿಗಾಗಿ ಬರೀತಾ ಇದ್ದೀನಿ..

ಬಹಳ ಚಿಕ್ಕವಳಿದ್ದಾಗ ಕನಸು ಕಾಣುತ್ತಿದ್ದೆ...ನಾನು ಹಕ್ಕಿ ಆಗಬೇಕು ಅಂತಾ...ಚಿಟ್ಟೆಯಾಗಬೇಕು ಅಂತಾ...ಅರಳುವ ಹೂ ಆಗಬೇಕು ಅಂತಾ... ಮಿನುಗುವ ನಕ್ಷತ್ರ ಆಗಬೇಕು ಅಂತಾ..
ಈಗ ಎಲ್ಲಾ ನಿನ್ನ ಬಗೆಗಿನ ಕನಸುಗಳು...ನೀನು ಕಾಣ್ತೀಯಾ??? ಎಲ್ಲಕ್ಕೂ ನೀನೆ ಉತ್ತರ ಕೊಡಬೇಕು...ಕನಸಿನ ಮಾತಾಡಿ, ನೀನು ಕನಸಿಗೆ ಜಾರಿದರೆ ಕಷ್ಟ ಮತ್ತೆ ನನ್ಗೆ ಸಿಗದೆ ಅಲ್ಲೆ...

ಏನೋ ಜನ ಹೇಳ್ತಾರೆ ಇದು ಕನಸಲ್ಲಿ ಬದುಕುವ ವಯಸ್ಸಂತೆ...ಈ ಕನಸುಗಳು ಒಮ್ಮೊಮ್ಮೆ ನನ್ನನ್ನ ಹಕ್ಕಿ, ಹೂ, ಚಿಟ್ಟೆ, ಮಳೆ ಬಿದ್ದ ನಂತರ ನಗುವ ಹಸಿರು, ಹೊಳೆವ ನಕ್ಷತ್ರ ಮಾಡುತ್ತೆ...ನಾನು ವಯಸ್ಸಿನ ಹುಚ್ಚಾಟ ಅಂಥಾ ಸಿರಿಯಸ್ ಆಗ್ತೀನಿ ಆಮೇಲೆ ನಿನ್ನ ನೆನಪಿಸಿಕೊಳ್ತೀನಿ ಮತ್ತೆ ಹುಚ್ಚಾಟ ಮತ್ತೆ ಮೄದುವಾಗುತ್ತೀನಿ ಮತ್ತೆ ಗಂಭೀರವಾಗುವ ಪ್ರಯತ್ನ ಮತ್ತದೇ ಕಂಡೂ ಕಾಣದ ನಗು ತುಟಿಯಂಚಲ್ಲಿ ಸುಳಿದು, ನೆನೆದಷ್ಟು ಮೌನ ಝೇಂಕಾರ ಮನಸಲ್ಲಿ....ಇದೇನಾ ಚಂಚಲತೆ ಎಂದ್ರೆ...ಆಗಿದ್ರೆ ಇದೇ ನನಗಿಷ್ಟ..ಒಮ್ಮೊಮ್ಮೆ ನಿನ್ನ ನೆನಪಿಸಿಕೊಂಡು ಮಾಡುವುದೆಲ್ಲವನ್ನು ಬಿಟ್ಟು ಬೇರೇನೋ ಮಾಡುತ್ತೀರುತ್ತೇನೆ...ಹುಮ್ಮ್ ನಿನ್ನ ಇರುವಿಕೆ ನೆನೆದರೆ ಮೆಲ್ಲಗೆ ಮಿಂಚೊಂದು ಮನದಲ್ಲಿ ಪಸರಿಸಿ ಮಾಯವಾಗುತ್ತೆ..

ಬಹಳ ಹಿಂದಿನಿಂದಲೂ ಕನಸು ಕಟ್ಟಿದ್ದೇ,,,ಇಗಲೂ ಕಟ್ಟುತ್ತಾ ಇದ್ದೀನಿ...

ಬಹು ಮಾತಿಲ್ಲದೆ ನನ್ನ ಎಲ್ಲಾ ಮಾತುಗಳಿಗೂ ನಸುನಕ್ಕು, ಕೆಲವೊಮ್ಮೆ ನಗುವೇ ಉತ್ತರವಾಗಿ ಬಿಡುವ ಹಸನ್ಮುಖಿ, ಸದಾ ಸಹಜವಾಗೇ ವರ್ತಿಸುವ ನಾಜುಕೂ, ಅಡಂಬರವಿಲ್ಲದ ನಿವೇದನೆಗಳು, ಹೀಗೊಂದಿಷ್ಟು ನೋವಿಗೆ ಮಿಡಿಯುವ ಮನಸ್ಸು, ಸಮಾನತೆಯ ಹಂಬಲವಿರುವ ಪುಟಾಣಿ ಕನಸಿನ ಚೆಲುವ, ಮುಖ್ಯವಾಗಿ ನನ್ನ ಒಳ್ಳೆಯ ಸ್ನೇಹಿತ....ನಾ ಆತನನ್ನು ಮಗುವಾಗಿ ಭಾವಿಸುವ ಹಾಗೆ ಆತ ನನ್ನ ಮಗುವಾಗಿ ಜೊಪಾನ ಮಾದುವ ಭಾವ, ಸದಾ ಪ್ರೀತಿ ತುಂಬಿದ ಜಗಳಗಳು,ಮುನಿಸುಗಳು, ನಂತರ ತುಸುವಷ್ಟೆ ನಗು.....

ದೂರದ ಹಸಿರು-ಬೆಟ್ಟಗಳನ್ನು ನೋಡುತ್ತಾ... ಅಲ್ಲೊಮ್ಮೆ,ಇಲ್ಲೊಮ್ಮೆ ನಿಂತು ಮೈಮರೆತು ನಗುತ್ತಾ...ಆ ಹಸಿರನ್ನು ದಾಟಿ ಹಾರುತ್ತಾ,ಆಟವಾಡುತ್ತಾ,ಹುಡುಗಾಟವಾಡುತ್ತಾ...ಆ ಹಸಿರು ನೆಲ,ನೀಲಿ ಆಕಾಶ ಅದನ್ನು ಮೀರಿದ ನಮ್ಮಿಬ್ಬರ ಕಲರವ...ಅದ್ಬುತವಾಗಬಾರದೆ ಪ್ರಪಂಚ..ದಿನಗಳಾಗಬಾರದೆ ಸೊಗಸಿನ ಬಂಗಾರದವೂ...

ಮಲಗಿಯೂ ನಿದ್ದೆ ಬಾರದ ರಾತ್ರಿಗಳಲ್ಲಿ ಚಂದಮಾಮನನ್ನು ನೋಡುತ್ತಾ..ನಕ್ಷತ್ರಗಳನ್ನು ಕಲೆಹಾಕುತ್ತಾ...ಹೊಸ ಕನಸುಗಳ ಹೆಣೆಯುತ್ತಾ ನತ್ರಿಸುವ ಹಕ್ಕಿಯಾಗಬೇಕು...ಆ ನಿನ್ನ ಬೆಚ್ಚಗಿನ ತೋಳುಗಳಲ್ಲಿ ಮಲಗಿ,ಕನಸ ಮಾರುವ ಚೆಲುವ ಒಂದು ಕಥೆ ಹೇಳು ಅಂತಾ ಪೀಡಿಸಬೇಕು...
ಆ ರಾತ್ರಿ ನಕ್ಷತ್ರಗಳನ್ನು ಕಲೆಹಾಕುತ್ತಾ,,, ಸದ್ದಿಲ್ಲದೆ ನಿನ್ನ ಬೆಚ್ಚನೆಯ ತೊಡೆಯ ಮಗುವಾಗಬೇಕು...

ಕಾಣುತ್ತಲೇ ಇರುತ್ತೆನೆ ಕನಸು ನನಗಾಗಿ ಅಲ್ಲ ನಿನಗಾಗಿ
ಅಲ್ಲಾ! ನಮಗಾಗಿ...

ಪ್ರೀತಿಯಿಂದ ನಿನ್ನವಳು,
ಭೂಮಿ

:)


ಪ್ರಿಯ moony,,

ನಾನು ಭೂಮಿ,ನವಿಲು ಬಣ್ಣಗಳ ಹುಡುಗಿ..ನೂರೆಂಟು ಬಣ್ಣದ ಕನಸು ಕಟ್ಟುತ್ತೀನಿ....ಮನಸಲ್ಲೇ ಹಾರೋ ಹಕ್ಕಿಯಾಗ್ತೀನಿ...ಬಣ್ಣಗಳ ತೊಟ್ಟು ಚಿಟ್ಟೆಯಾಗ್ತೀನಿ....ಹಾಡುತ್ತೀನಿ, ಆಡುತ್ತೀನಿ, ಕುಣಿತ್ತೀನಿ... ಒಮ್ಮೊಮ್ಮೆ ಹರಿಯೋ ನದಿಯಾಗ್ತೀನಿ ಆಮೇಲೆ ನಿಂತಿರೋ ನೀರು...ಬೀಸೋ ಗಾಳಿಗಿಂತ ವೇಗವಾಗ್ತೀನಿ...ಮೋಡಗಳಂತೆ ತೇಲುತ್ತೀನಿ..ಸಿಕ್ಕೆಬಿಟ್ಟೆನೆಂದರೂ ಸಿಗಲ್ಲ ನಿನ್ನ ಕೈಗೆ ಅಂತಾ ನಕ್ಷತ್ರ ನಾನು... ಹುಡುಕ್ತೀಯಾ, ತಿಳಿತ್ತೀಯಾ ನನ್ನ...


ನೂರೆಂಟು ಬೆಟ್ಟ ಕರಗಿದ್ರು
ನಾನು ಬಣ್ಣದ ಚಿಟ್ಟೆ ಬಂದಿಯಾಗಲ್ಲ
ನೀವು ಹುಡುಗರ ಕೈಯಲ್ಲಿ ಎಂದಿಗೂ...


-ಭೂಮಿ( ಬಾನಿಗೆ ಹಾರುವ ಮುನ್ನ )