
ಪ್ರಿಯ ಮೂನಿ,
ಇವತ್ತು ಆಕಾಶ ಮತ್ತಷ್ಟು ನೀಲಿಯಾಗಿದೆ. ಮಳೆ ಮುಗಿದಿದೆ ಅಲ್ಲವಾ ಅದಕ್ಕೆ ಇರಬೇಕು...ಕ್ಲಾಸ್ರೂಂ ಅಲ್ಲಿ ಕುಳಿತು ಕಿಟಕಿ ಗಾಳಿಗೆ ಕೂದಲೊಡ್ಡಿ ಅದೇ ಚಾಮುಂಡಿಬೆಟ್ಟ ನೋಡುವಾಗ ನಿನ್ನ ನೆನೆಪಾಯಿತು...ನೀನು ಉಸಿರಾಡಿ ಬಿಟ್ಟಗಾಳಿ ನನ್ನೊಳಗೆ ಸುಳಿದೊಯ್ತು ಅನ್ಸುತ್ತೆ...
ನಿಜವೇನೂ ಗೊತ್ತಾ.. ನಾನು ನಿನ್ನ ಪ್ರೀತಿಸ್ತಿದ್ದೀನಿ ಅದ್ದಕಾದರೂ ನನ್ನ ಕಣ್ಣ ಮುಂದೆ ಬಂದುಬಿಡೊ..
ನಿನಗಾಗಿ ನಾ ಕಾಯುತ್ತಿರುವ ದಿನಗಳನ್ನು ನೆನೆದರೆ ನಿನಗೆ ಬೇಜಾರು ಆಗಲ್ವಾ ನೀನು ನನಗೊಸ್ಕರ ಕಾದಿರುವೆ ಅಂತಾ ಹುಚ್ಚು ಆಸೆ ಕಣೋ...ಹುಮ್.. ಅಲ್ಲಾ ಕಣೋ ನಿನಗೆ ಈ ಜೀವನ ಸವೆಸಲು ಜೊತೆಗಾತಿ ಬೇಡವಾ?? ನಿನ್ನೆಲ್ಲಾ ಕನಸುಗಳಿಗೆ ಸ್ಪಂದಿಸುವ ಗೆಳತಿ, ನಿನ್ನ ಸ್ವಾತಂತ್ರ್ಯದಲ್ಲಿ ಬಂದಿಯಾಗುವ ಮನಸ್ಸು,ನಿನ್ನ ನಗುವಿನಲ್ಲಿ ಬೆಳಕು ಕಾಣುವ ಹಣತೆ, ನಿನ್ನೆಲ್ಲವೂ ನನ್ನದು ಎಂದು ಹೇಳುವ ಪುಟ್ಟ ಹೊಳೆವ ಕಂಗಳ ಪೋರಿ ಏನೊ ಬೇಕಾ?? ಯೋಚಿಸಿನೋಡು...
ನಿನಾಗಾಗಿ ಈ ಪುಟ್ಟ ಕಾಗದದ ದೋಣಿ ತೇಲಿ ಬಿಡುತ್ತಿದ್ದೆನೆ ಈ ಜಿಂದಗಿಯ ಸಾಗರದಲ್ಲಿ
ಆದರೆ ತೆಗೆದುಕೋ ಇಲ್ಲಾ ತೇಲಲಿ ಬಿಡು ನನ್ನೆದೆಯ ಕನಸುಗಳು..
ನಿನ್ನವಳು
ಭೂಮಿ