
ಪ್ರಿಯ moony,
ನನ್ನ ಮನದಲ್ಲಿ ನಿನ್ನ ಬಗ್ಗೆ ಇರಬಹುದು,ಅಮ್ಮನ ಬಗ್ಗೆ ಇರಬಹುದು, ನನ್ನ ಮನೆಯ ಬಗ್ಗೆ ಇರಬಹುದು.. ಇರಬಹುದಾದರೂ ಏನು? ಪ್ರೀತಿನಾ? ಹುಡುಕುತಿದ್ದೇನೆ ಮತ್ತೂ ಗುರಿ ಸಿಗದ ಹುಡುಕಾಟವಿರಬಹುದು ಇದು....
ಪ್ರೀತಿ ಅಂದ್ರೆ ಜೊತೆಗಾರರನ್ನ ಹುಡುಕುವುದಾ??
ಪ್ರೀತಿ ಅಂದ್ರೆ ಕನಸು ಕಾಣುವುದಾ??
ಪ್ರೀತಿ ಅಂದ್ರೆ ಅಪ್ಪ ಅಮ್ಮ ನಮ್ಮ ಬಗ್ಗೆ ಕಟ್ಟಿರುವ ನೂರು ಕನಸು ನನಸು ಮಾಡೋದಾ??
ಪ್ರೀತಿ ಅಂದ್ರೆ ಮತ್ತೆ ಮತ್ತೆ ಮರೆಯಲಾಗದ ನೆನಪುಗಳೊಡನೆ ಬದುಕುವುದಾ?
ಅಪ್ಪ-ಅಮ್ಮ ನಮ್ಮನ್ನು ಹೆತ್ತಿರುತ್ತಾರೆ,ಪ್ರೀತಿಸುತ್ತಾರೆ,ಗೌರವಿಸುತ್ತಾರೆ,ಬದುಕನ್ನು-ಕನಸುಗಳನ್ನು ಕಲಿಸಿಕೊಡುತ್ತಾರೆ....ನಾನು ಅವರನ್ನು ಪ್ರೀತಿಸುತ್ತೇನೆ ಹಾಗು ಅವರು ಕೂಡ ಆದ್ದರಿಂದ ಇಲ್ಲಿ ಪ್ರೀತಿಗೆ ಒಂದಷ್ಟು ಅರ್ಥಗಳು ಇರುತ್ತದೆ ಅಲ್ಲವಾ??
ಒಳ್ಳೆಯ ಬದುಕನ್ನು ಕಟ್ಟಿಕೊಡುವ ಅಪ್ಪ-ಅಮ್ಮ ಹಾಗೆಯೇ ಬದುಕು ಸವೆಸಲು ಒಳ್ಳೆಯ ಜೊತೆಗಾರನನ್ನು ಹುಡುಕಿಕೊಡುತ್ತಾರೆ ಅಲ್ಲವಾ? ಆದರು ನಾನ್ಯಾಕೆ ವೃಥಾ ಕನಸುಗಳನ್ನು ಕಟ್ಟುತ್ತೇನೆ...
ನನಸಾಗಬೇಕು ಅಂತೇನು ಕನಸು ಕಟ್ಟುತಿಲ್ಲವಲ್ಲ ಅಂತ ಮನಸಿಗೆ ಉತ್ತರ ಕೊಟ್ಟು ಮತ್ತೆ ಯೋಚಿಸುತ್ತೇನೆ ಮತ್ಯಾಕೆ ಈ ಕನಸುಗಳು??
ಉತ್ತರ ನೀನೆ ಹೇಳಬೇಕು.....
ಹುಚ್ಚು ಕನಸು ಕಾಣಬೇಕು ಅನಿಸಿತು ಈ ಒಂಟಿತನದಲ್ಲಿ ಕಂಡಿದ್ದೇನೆ ನನಸು ಮಾಡುವ ಯಾವ ಯೋಚನೆಗಳು ಇಲ್ಲದೆ..
ಕನಸಿನ ಹಕ್ಕಿ ಹಾರದಿದ್ದರು ಹಕ್ಕಿ ನನ್ನದೇ ಎಂದೆದಿಗೂ...
ನಿನ್ನವಳು,
ಭೂಮಿ