Tuesday, February 23, 2010

ಒಲವ ಬೆಳಕಿಗಾಗಿ


ಪ್ರಿಯ ಮೂನಿ,

ಇವತ್ತು ಮತ್ತೂ ನೀಲಿಯಾದ ಆಕಾಶ, ಅಲ್ಲೊಂದು ಇಲ್ಲೊಂದು ಹಾರುವ ಹಕ್ಕಿ ಹುಮ್.... ನಾವು ಹಕ್ಕಿಗಳಾಗಬೇಕ್ಕಿತ್ತು ಅಲ್ಲೇನೋ??? ಹುಮ್... ನೋಡಿದಷ್ಟು ಮುಗಿಯದ ಆಕಾಶ,ಈ ತೆಳುಗಾಳಿ ಪ್ರೀತಿಯ ರಂಗೇರಿಸುತ್ತಿದೆ.. ನಿಜ ಹೇಳಲಾ ನನಗೆ ನಿನಗಿಂತಾ ಈ ನೀಲಿ ಆಕಾಶವೇ ಇಷ್ಟ....ಕೋಪನಾ???:)
ಪ್ರೀತಿ ಅಂದರೆ ಮುಗಿಯದ ನೀಲಿ ಆಕಾಶ, ಸದ್ದಿಲ್ಲದೆ ಹರಿಯುವ ನೀರು,ಹಾರುವ ಹಕ್ಕಿ,ಅರಳುವ ಹೂಗಳು,ಸುಳಿದಾಡುವ ಚಿಟ್ಟೆ, ಮಂದವಾದ ಗಾಳಿ...ಪ್ರೀತಿ ಅಂದರೆ ಆಗಾಧ ನೆನಪುಗಳ ಭಂಡಾರ...ಪ್ರೀತಿ ಅಂದರೆ ಭೂಮಿ, ಪ್ರೀತಿ ಅಂದರೆ ನೀನು, ನಿನಾಗಾಗಿ ಕಾಯುವ ನಾನು, ಪ್ರೀತಿ ಅಂದರೆ ಮತ್ತೆನೊ ಇದೆ.. ಪ್ರೀತಿ ಅಂದರೆ ಏನು ಇಲ್ಲ...

ಹುಮ್... ಮತ್ತೆ..

ಈ ಬಾಳೆಲ್ಲ ನೀನು ನೆನೆಯುವಷ್ಟು ಹಾಡುಗಳು ನಾನು...ನಿನ್ನ ಬಗೆಗಿನ ನನ್ನೊಳಗಿನ ಪ್ರೀತಿ ನಾನು ಎಂದು ನಂಬಿರದ ದೇವರ ಕಾಣಿಕೆನಾ ಅನ್ಸುತ್ತೆ ಕಣೋ...ಅಂತೂ ನನ್ನ ಕನಸು, ಜೀವನ ಎಲ್ಲವೂ ನೀನೆ...ಕೊಡಬಹುದು ನಾ ನಿನಗೆ ಈ ಆಕಾಶದಷ್ಟು ಪ್ರೀತಿ ಹಾಗು ಮತ್ತೆನೂ ಇಲ್ಲ...ಏ! ಕಳ್ಳ ನಕ್ಕುಬಿಡೊ ಒಮ್ಮೆ ಯಾಕೋ ಈ ಒಂಟಿ ಜೀವನದಲ್ಲಿ ನಿನಗಾಗಿ ಬರೆಯುತ್ತಿದ್ದೆನೆ ಆ ಹುಚ್ಚುತನಕ್ಕಾಗಿಯಾದರು ನಕ್ಕುಬಿಡೊ...ಏನೊ ನನ್ನ ಕಣ್ಣೊಳಗಿನ ಈ ನೀಲಿ ನಿನ್ನ ಮನಸ್ಸು ತುಂಬಿಸುವ ನನ್ನ ಸಣ್ಣ ಪ್ರಯತ್ನ ಅಸಾಧ್ಯವಾಗದೆಂದು ಭಾವಿಸುತ್ತೆನೆ...
ನನ್ನ ಚೆಂಗುಲಾಬಿಯ ಪುಟ್ಟಪೋರ ನೀನು..ಎಲ್ಲಿದ್ದಿಯೊ ಹೇಗಿದ್ದಿಯೊ...ಅಂತೂ ನನ್ನ ಮನದೊಳಗಿನ ಹೇಳಲಾರದ ಹಾಡಿನ ಸಾಲುಗಳು ನೀನು ಅನ್ನೋದು ಈ ಆಕಾಶದಷ್ಟು ನಿಜ....

ನಿನ್ನ ನಗುವ ಕಂಗಳ ಬೆಳಕಂತೆ ನಾನು ನಿಜವೇನೊ????

ಕಾದು ಕಾದು ಬೆಂಡಾಗಿ ನನ್ನೆಲ್ಲ ಕನಸುಗಳು ಕತ್ತಲಾಗುವ ಮುನ್ನ ಈ ಮನದ ಚೇತನ ಹತ್ತಿ ಉರಿಸಿ ಕಾಯುತ್ತಿರುವೆ ಕೇವಲ ನಿನಗಾಗಿ..

ನಿನಗಾಗಿ, ನಿನ್ನ ಒಲವ ಬೆಳಕಿಗಾಗಿ
ನಿನ್ನವಳು ಭೂಮಿ

1 comment:

Sharu said...

Ningintha neeli aakaasha ne ishta andre,kopa barde irutha !!!!!!!

Bhumi heladu correct, Preethi andre Bhumi, koneli, Preethi andre yenoo illa. Typical Bhumi :)

Beda moony, avalu heludlu antha nakbittu thappu maadbeda, aamele nagadu nodu, hallu bitkondu antha regusthale ;)


Bhumi, ondu puttani hudugi.
Ninna yeshtara mattige preethusthale antha andre, adanna varnisalu asaadhya. Adu yesht preethi maadthale, adunnoo measure maadlik aagalla.
But ondanthu nija, ninna yaaroo preethisadashtu preethi maadthale. Ninna avalashtu yaaroo preethi maadak aagalla