Monday, July 12, 2010

ಒಂದೆರಡು ಮಾತು...


ಪ್ರೀತಿಯ ಮೂನಿ,

ಪ್ರೀತಿ ಆಚೆ ಒಂದೆರಡು ಮಾತು .......

ಕಣ್ಣು ಮನದ ಮಾತು ಬಿಚ್ಚಿಡುತ್ತೆ ಅಂತಾರೆ... ಪ್ರತಿ ಬಾರಿ ಕನ್ನಡಿ ಮುಂದೆ ನಿಂತು ನನ್ನ ಕಣ್ಣನ್ನು ನಾನೇ ನೋಡಿ ಪ್ರಶ್ನಿಸಿಕೊತೀನಿ ನನ್ನ ಮನದ ಮಾತು ಬಿಚ್ಚಿಡುತಿವೆಯೇ ಅವು...ನನಗೆ ಅಲ್ಲಿ ಕಣ್ಣು ಬಿಟ್ಟು ಮತ್ತೇನು ಕಾಣುವುದೇ ಇಲ್ಲ ಮತ್ತೆ ಮನದ ಮಾತು ಪ್ರಶ್ನೆ ಯಾಗಿಯೇ ಉಳಿದು ಬಿಡುತ್ತದೆ.. ಅದು ನಿಜ ಯಾರ ಕಣ್ಣಲ್ಲಿ ಯಾರ ಬಗೆಗೆ ಯಾವ ಕನಸು ನಿಚ್ಚಳವಾಗಿದೆಯೋ??? ಯಾರ ಮನವು ಏನನ್ನು ಮಾತಡುತಿರುತ್ತದೆಯೋ?? ಮತ್ತೆ ಎಲ್ಲವು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.....
ಪ್ರತಿ ಸಾರಿ ಮನಸಿನ ತುಂಬ ಪ್ರಶ್ನೆಗಳನ್ನೇ ತುಂಬಿಕೊಂಡು ಉತ್ತರಕ್ಕೆ ಪರದಾಡುವ ನನ್ನ ನೋಡಿ ನಗುವ ನಿನ್ನ ಕಣ್ಣಲ್ಲಿ ನನ್ನ ಮನದ ಮಾತಿವೆ ಅನಿಸುತಿದೆ...
ಈ ಎಲ್ಲ ಪರದಾಟಕ್ಕು ಕಡಿವಾಣ ಹಾಕಿ ನನ್ನ ಮನದ ತುಂಬ ಪ್ರೀತಿ ತುಂಬಿಸಲು ಬರಬೇಕಿದೆ ನೀನು ಇನ್ನು ಹತ್ತಿರಕ್ಕೆ......
ಮತ್ತೆ ದೂರ ಇರುವ ನಿನಗೆ ಈ ಮನದ ಪರದಾಟ ಅರ್ಥವಾದರೆ ಸಾಕು.....

ಕಾದಿರುವೆ ನಿನಗಾಗಿ,ನಿನ್ನ ಮನದ ಪ್ರೀತಿಗಾಗಿ .........
missing you ....
ನಿನ್ನವಳು,
ಭೂಮಿ

2 comments:

Sharu said...

"ಪ್ರತಿ ಬಾರಿ ಕನ್ನಡಿ ಮುಂದೆ ನಿಂತು ನನ್ನ ಕಣ್ಣನ್ನು ನಾನೇ ನೋಡಿ ಪ್ರಶ್ನಿಸಿಕೊತೀನಿ ನನ್ನ ಮನದ ಮಾತು ಬಿಚ್ಚಿಡುತಿವೆಯೇ ಅವು...ನನಗೆ ಅಲ್ಲಿ ಕಣ್ಣು ಬಿಟ್ಟು ಮತ್ತೇನು ಕಾಣುವುದೇ ಇಲ್ಲ". Yaar kannamma kaanadu???? Ninda, nin moony da !!!!! Barthane bidu, yaak ashtondu yochane, aadashtu bega nin hathra ne barthane. Miss aagde bandu ninna mrs maadthane ;)

ಸೀತಾರಾಮ. ಕೆ. / SITARAM.K said...

ಪ್ರೇಮಿಯ ಮನದಾಳದ ತೀಕ್ಷ್ಣ ಭಾವಾಭಿವ್ಯಕ್ತಿ ತಮ್ಮ ಲೇಖನದಲ್ಲಿದೆ.
ಅದ್ಭುತ ಉತ್ಕಟ ಭಾವನೆಗಳು. ಮೂನಿಯೇ ಧನ್ಯ!