Sunday, February 21, 2010

ನಿನಗಾಗಿ


ಪ್ರಿಯ ಮೂನಿ,

ರಾತ್ರಿ ನಿದ್ದೆ ಎಂಬ ಮಾಯೆ ನನ್ನ ಕಣ್ಣಿಗೆ ಸುಳಿದೇ ಇಲ್ಲವೋ...ದಿನಾ ರಾತ್ರಿ ಹೀಗೆ..ನಿನ್ನ ಕನಸುಗಳೇ ಹೀಗಾ? ನಿದ್ದೆ ತಿನ್ನುತ್ತದಾ ಹಾಗಾದರೆ ನಿನ್ನ ಕನಸುಗಳೇ ನನ್ನ ಬಳಿ ಇರಲಿ ಕಣೋ...

ಮಲಗಿದ್ರು ಬಿಡಲ್ಲ ನಿನ್ನ ಕನಸುಗಳು ಬಂದು ನನ್ನ ಕಾಡುತ್ತೆ...ನಗುವ ನಿನ್ನ ಕಂಗಳ ಚೆಲುವು ಹೇಗಿರಬಹುದು?? ನಿತ್ಯ ನಾ ಕಾಣುವ ಕನಸುಗಳೆಷ್ಟು, ನಿದ್ದೆ ಮಾಡದ ದಿನಗಳೆಷ್ಟು...ಒಮ್ಮೊಮ್ಮೆ ಆಕಾಶದ ಮಿನುಗುವ ತಾರೆಯಾಗಿಬಿಡ್ತಿನಿ...ಒಮ್ಮೊಮ್ಮೆ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಾಗ್ತೀನಿ....ಹೇಳಲಿಕ್ಕೆ ಇರುವ ಎಷ್ಟೋ ಮಾತುಗಳು ಬಾಯಿಯವರೆಗೆ ಬಂದು ನಿಂತುಬಿಡುತ್ತವೆ...ಏನು ಮಾಡೋದು ನೀನು ನನ್ನ ಎದುರಿಗೆ ಬಂದಿಲ್ಲವಲ್ಲ..

ನಿಜಾ ಹೇಳ್ಲಾ... ಸಮಯ ಓಡುತ್ತೀರುವ ಅರಿವಿಲ್ಲದೆ ನಿನಗಾಗಿ, ನಿನ್ನ ಬಗ್ಗೆ ಕಂಡ ಕನಸುಗಳ ನೆನಪಿಗಾಗಿ ಬರೀತಾ ಇದ್ದೀನಿ..

ಬಹಳ ಚಿಕ್ಕವಳಿದ್ದಾಗ ಕನಸು ಕಾಣುತ್ತಿದ್ದೆ...ನಾನು ಹಕ್ಕಿ ಆಗಬೇಕು ಅಂತಾ...ಚಿಟ್ಟೆಯಾಗಬೇಕು ಅಂತಾ...ಅರಳುವ ಹೂ ಆಗಬೇಕು ಅಂತಾ... ಮಿನುಗುವ ನಕ್ಷತ್ರ ಆಗಬೇಕು ಅಂತಾ..
ಈಗ ಎಲ್ಲಾ ನಿನ್ನ ಬಗೆಗಿನ ಕನಸುಗಳು...ನೀನು ಕಾಣ್ತೀಯಾ??? ಎಲ್ಲಕ್ಕೂ ನೀನೆ ಉತ್ತರ ಕೊಡಬೇಕು...ಕನಸಿನ ಮಾತಾಡಿ, ನೀನು ಕನಸಿಗೆ ಜಾರಿದರೆ ಕಷ್ಟ ಮತ್ತೆ ನನ್ಗೆ ಸಿಗದೆ ಅಲ್ಲೆ...

ಏನೋ ಜನ ಹೇಳ್ತಾರೆ ಇದು ಕನಸಲ್ಲಿ ಬದುಕುವ ವಯಸ್ಸಂತೆ...ಈ ಕನಸುಗಳು ಒಮ್ಮೊಮ್ಮೆ ನನ್ನನ್ನ ಹಕ್ಕಿ, ಹೂ, ಚಿಟ್ಟೆ, ಮಳೆ ಬಿದ್ದ ನಂತರ ನಗುವ ಹಸಿರು, ಹೊಳೆವ ನಕ್ಷತ್ರ ಮಾಡುತ್ತೆ...ನಾನು ವಯಸ್ಸಿನ ಹುಚ್ಚಾಟ ಅಂಥಾ ಸಿರಿಯಸ್ ಆಗ್ತೀನಿ ಆಮೇಲೆ ನಿನ್ನ ನೆನಪಿಸಿಕೊಳ್ತೀನಿ ಮತ್ತೆ ಹುಚ್ಚಾಟ ಮತ್ತೆ ಮೄದುವಾಗುತ್ತೀನಿ ಮತ್ತೆ ಗಂಭೀರವಾಗುವ ಪ್ರಯತ್ನ ಮತ್ತದೇ ಕಂಡೂ ಕಾಣದ ನಗು ತುಟಿಯಂಚಲ್ಲಿ ಸುಳಿದು, ನೆನೆದಷ್ಟು ಮೌನ ಝೇಂಕಾರ ಮನಸಲ್ಲಿ....ಇದೇನಾ ಚಂಚಲತೆ ಎಂದ್ರೆ...ಆಗಿದ್ರೆ ಇದೇ ನನಗಿಷ್ಟ..ಒಮ್ಮೊಮ್ಮೆ ನಿನ್ನ ನೆನಪಿಸಿಕೊಂಡು ಮಾಡುವುದೆಲ್ಲವನ್ನು ಬಿಟ್ಟು ಬೇರೇನೋ ಮಾಡುತ್ತೀರುತ್ತೇನೆ...ಹುಮ್ಮ್ ನಿನ್ನ ಇರುವಿಕೆ ನೆನೆದರೆ ಮೆಲ್ಲಗೆ ಮಿಂಚೊಂದು ಮನದಲ್ಲಿ ಪಸರಿಸಿ ಮಾಯವಾಗುತ್ತೆ..

ಬಹಳ ಹಿಂದಿನಿಂದಲೂ ಕನಸು ಕಟ್ಟಿದ್ದೇ,,,ಇಗಲೂ ಕಟ್ಟುತ್ತಾ ಇದ್ದೀನಿ...

ಬಹು ಮಾತಿಲ್ಲದೆ ನನ್ನ ಎಲ್ಲಾ ಮಾತುಗಳಿಗೂ ನಸುನಕ್ಕು, ಕೆಲವೊಮ್ಮೆ ನಗುವೇ ಉತ್ತರವಾಗಿ ಬಿಡುವ ಹಸನ್ಮುಖಿ, ಸದಾ ಸಹಜವಾಗೇ ವರ್ತಿಸುವ ನಾಜುಕೂ, ಅಡಂಬರವಿಲ್ಲದ ನಿವೇದನೆಗಳು, ಹೀಗೊಂದಿಷ್ಟು ನೋವಿಗೆ ಮಿಡಿಯುವ ಮನಸ್ಸು, ಸಮಾನತೆಯ ಹಂಬಲವಿರುವ ಪುಟಾಣಿ ಕನಸಿನ ಚೆಲುವ, ಮುಖ್ಯವಾಗಿ ನನ್ನ ಒಳ್ಳೆಯ ಸ್ನೇಹಿತ....ನಾ ಆತನನ್ನು ಮಗುವಾಗಿ ಭಾವಿಸುವ ಹಾಗೆ ಆತ ನನ್ನ ಮಗುವಾಗಿ ಜೊಪಾನ ಮಾದುವ ಭಾವ, ಸದಾ ಪ್ರೀತಿ ತುಂಬಿದ ಜಗಳಗಳು,ಮುನಿಸುಗಳು, ನಂತರ ತುಸುವಷ್ಟೆ ನಗು.....

ದೂರದ ಹಸಿರು-ಬೆಟ್ಟಗಳನ್ನು ನೋಡುತ್ತಾ... ಅಲ್ಲೊಮ್ಮೆ,ಇಲ್ಲೊಮ್ಮೆ ನಿಂತು ಮೈಮರೆತು ನಗುತ್ತಾ...ಆ ಹಸಿರನ್ನು ದಾಟಿ ಹಾರುತ್ತಾ,ಆಟವಾಡುತ್ತಾ,ಹುಡುಗಾಟವಾಡುತ್ತಾ...ಆ ಹಸಿರು ನೆಲ,ನೀಲಿ ಆಕಾಶ ಅದನ್ನು ಮೀರಿದ ನಮ್ಮಿಬ್ಬರ ಕಲರವ...ಅದ್ಬುತವಾಗಬಾರದೆ ಪ್ರಪಂಚ..ದಿನಗಳಾಗಬಾರದೆ ಸೊಗಸಿನ ಬಂಗಾರದವೂ...

ಮಲಗಿಯೂ ನಿದ್ದೆ ಬಾರದ ರಾತ್ರಿಗಳಲ್ಲಿ ಚಂದಮಾಮನನ್ನು ನೋಡುತ್ತಾ..ನಕ್ಷತ್ರಗಳನ್ನು ಕಲೆಹಾಕುತ್ತಾ...ಹೊಸ ಕನಸುಗಳ ಹೆಣೆಯುತ್ತಾ ನತ್ರಿಸುವ ಹಕ್ಕಿಯಾಗಬೇಕು...ಆ ನಿನ್ನ ಬೆಚ್ಚಗಿನ ತೋಳುಗಳಲ್ಲಿ ಮಲಗಿ,ಕನಸ ಮಾರುವ ಚೆಲುವ ಒಂದು ಕಥೆ ಹೇಳು ಅಂತಾ ಪೀಡಿಸಬೇಕು...
ಆ ರಾತ್ರಿ ನಕ್ಷತ್ರಗಳನ್ನು ಕಲೆಹಾಕುತ್ತಾ,,, ಸದ್ದಿಲ್ಲದೆ ನಿನ್ನ ಬೆಚ್ಚನೆಯ ತೊಡೆಯ ಮಗುವಾಗಬೇಕು...

ಕಾಣುತ್ತಲೇ ಇರುತ್ತೆನೆ ಕನಸು ನನಗಾಗಿ ಅಲ್ಲ ನಿನಗಾಗಿ
ಅಲ್ಲಾ! ನಮಗಾಗಿ...

ಪ್ರೀತಿಯಿಂದ ನಿನ್ನವಳು,
ಭೂಮಿ

1 comment:

Sharu said...

Bhumi, naan nin Moony ge helidini, bega barthini antha helidane... Neen in melaadru chennagi nidde maado. Hey Moony, ninge gotha, naan yaavde dina kelli, nenne chennagi nidde maadda andre, Bhumi heladu ishte, ""Illa anna, nange nidde ne barlilla. 3 or 4 o clock varegu eddidde" anthale. Pls Moony, bega baa, nam Bhumi na chennagi nodko, avala aarogya kedadanthe nodko