
ಪ್ರತಿ ಬಾರಿ ಮಳೆ ಸುರಿದು ಮುಗಿದಾಗ ಕಾಡುತ್ತವೆ ಆ ದಿನಗಳು...
ಅಲ್ಲಾ ಮಳೆ ಮುಗಿದ ರಾತ್ರಿಗಳು.......
ಊರೆಲ್ಲಾ ರಾತ್ರಿ ಕಾಯುವ ಹೊತ್ತಿನಲ್ಲ
ಅದೋ ಆ ರಸ್ತೆ ತುದಿಯಲ್ಲೇ ಗುರುತಿಸಿದ್ದೆ
ಅವನನ್ನ, ಆ ಸೋನೆ ಮಳೆಯ ಮುಸುಕಿನಲ್ಲಿ
ಅವನು ಕೊಡೆ ಹಿಡಿದು ಬರುವಾಗ...
ನಕ್ಕಿದ್ದೆ ಅವನಿಗಾಗಿ, ಅವನ ಪುಟ್ಟ ಕಂಗಳ
ಬೆಳಕ ಕಿಡಿಗಾಗಿ.......
ನನ್ನೆದರು ಅಂವ ನಿಂತಾಗ ಕಂಪಿಸಿದ್ದೆ
ಅವನ ಉಸಿರಲ್ಲಿ ಉಸಿರು ಹಿಡಿದು...
ನನ್ನೆದೆಯ ಅವನ ನೆನಪುಗಳಲ್ಲಿ ನೆನೆದಿದ್ದೆ
ಅವನ ಮಧುರ ಮಾತುಗಳನ್ನ...
ಬರಡಾದ ಬದುಕಿನ ಭರವಸೆಯ ಹೂವುಗಳನ್ನ.........
ಅವನೊಳಾಗಿತ್ತು ನನ್ನೆದೆಯ ಹಾಡಲಾರದ
ಹಾಡುಗಳ ಪಲ್ಲವಿಯ ಸಾಲುಗಳು...
ನಾಚಿದ್ದೆ ಅವನ ಚೆಲುವ ಸ್ವರದ ಧಾಟಿಗೆ
ಬೇಡಿದ್ದೆ ನಾನು ಅವನಿಗಾಗಿ....
ಅವನೊಳಗಿನ ನನ್ನ ಹಾಡಿನ ಭಾವಗಳಿಗಾಗಿ....
ಮಳೆ ಸುರಿಯುತ್ತಲ್ಲೇ ಇತ್ತು,ತಲುಪಿದ್ದೆವು ನಾವು ನಮ್ಮ
ಮನದ ಗೂಡಿಗೆ......
No comments:
Post a Comment