ಅಸಲು ಈ ಬದುಕಿಗೇನು ಅರ್ಥ...?
ಬದುಕು ಅಷ್ಟು ಸುಲಭದ ಅರ್ಥವೇ....?
ಸರಿ ಬದುಕಿಗೆ ನಾನು ಯಾರು....?
ನನ್ನ ಪಾಲಿಗೆ ಬದುಕೆಂಬುದು ಏನು....?
--------------------------------------------
ಬದುಕು ನಾನಾಡುವ ಆಟವೇ.....?
ಬದುಕು ನಾ ನೋಡುವ ನೋಟವೇ....?
ಬಂದದ್ದು ಆಡಬೇಕು, ಕಂಡದ್ದು ನೋಡಬೇಕು...
ಬದುಕು ತಾನಾಗೆ ಚಲಿಸೋ ಕಾಲದಂತೆ...
--------------------------------------------
ನನಗಿನ್ನೂ ಅದೇ ದುರಾಸೆ...
ನಾ ಬದುಕಿ ತೋರಿಸಬೇಕು...
ಇನ್ನೊಬ್ಬರ ಹೊಟ್ಟೆ ಉರಿಸುವಂತೆ...
ನನ್ನೆಡೆಗೆ ಮೆಚ್ಚುಗೆಗಳ ಹರಿಸುವಂತೆ....
----------------------------------------------------
ನಿನ್ನೆ ಮೊನ್ನೆ ಎಲ್ಲಾ ಕಳ ಕೊಂಡಿದನ್ನ
ಇಂದು ಹುಡುಕಿದರೂ ಸಿಗದೇ
ಮತ್ತೆ ನಾಳೆಯ ಮೇಲೆ ಭರವಸೆ ಇಟ್ಕೊಂಡು
ಕಾಯ್ತಾ ಕೂರ್ತಿವಲ್ಲಾ.... ಕನಸು ಅಂದ್ರೆ ಅದೇನಾ....?
3 comments:
Yes, ಮುನ್ನುಗ್ಗಿ..!
"ಜಿಂದಗಿ ಹರ್ ಕದಂ ಇಕ ನಯಿ ಜಂಗ್ ಹೈ" ಅಂತ ಓದ್ದಿದ್ದೆ/ಕೇಳಿದ್ದೆ..
ನಿಮ್ಮ ಕನಸು ನನಸಾಗಲಿ.. :)
ಮಸ್ತ್.
tumba chennagide.....
Post a Comment