Tuesday, July 27, 2010

ಪುಟ್ಟ ಕಾಗದದ ದೋಣಿ ....


ಕಳೆದ ನೆನಪುಗಳಿಗೆ ಒಂದಷ್ಟು ಒಲುಮೆಯ ಕಣ್ಣಿರು ...
---------------------------------
ಎಲ್ಲೆಲ್ಲೋ ಹುಡುಕಿ ....
ಸಿಕ್ಕ ಆ ಪುಟ್ಟ ಕಂಗಳಿಗೆ
ಈ ಮುದ್ದಾದ ಮಳೆಯೇ
ಉಡುಗೊರೆ ...
---------------------------------
ಪ್ರೀತಿ ಎಂದರೆ ,
ಮತ್ತೆ ನೆನಪಾಗುವ ಮಳೆ ಮುಗಿದ ರಾತ್ರಿಯಂತೆ,
ಅಮಾವಾಸ್ಯೆಯಲ್ಲಿ ನಾನು ನೆನೆಯುವ ಚಂದ್ರನಂತೆ ...
---------------------------------
ನನ್ನೊಳಗಿನ ನಿನ್ನ ನೆನಪುಗಳಿಗೆ
ಯಾಕೋ ನೀಡಲೇ ಬೇಕಿನಿಸಿದೆ ಒಂದು ಕಾಣಿಕೆ ..
ಸಾಕಾಗದೆ ಈ ನೀಲಿ ಆಕಾಶ ,
ದೂರದ ಬೆಟ್ಟ ,ಹರಿಯುವ ನೀರು ,
ನೆನೆದಷ್ಟು ಬೀಸುವ ಗಾಳಿ...
---------------------------------
ಪ್ರೀತಿ ಧಾರೆಯೆರೆದು ನೀನು ಬರಲಾರೆಯಾ ..??
ಈ ಜೀವನಕ್ಕೆ ಒಮ್ಮೆ ..
ಬೆಳಕಲ್ಲವೇನೋ ನನ್ನೊಳಗಿನ ನಿನ್ನ ಕನಸುಗಳು
ಈ ಮನದ ಕನಸುಗಳಿಗಾದರು ಬರಲಾರೆಯಾ
...

4 comments:

Dileep Hegde said...

ಹರಿಬಿಟ್ಟ ದೋಣಿಗಳು ಚೆನ್ನಾಗಿವೆ..

ಸೀತಾರಾಮ. ಕೆ. / SITARAM.K said...

ಮಳೆ ಮತ್ತೆ ಮತ್ತೆ ಬರುತ್ತದೆ! ಕಾಲಚಕ್ರ ಉರುಳುತ್ತಿರುತ್ತವೆ! ಕಾಗದದ ದೋಣಿಯಂತೆ ನಮ್ಮ ಕನಸುಗಳು ಹರಿಯುತ್ತವೆ! ಹಲವು ಒದ್ದೆಯಾಗಿ ಮುಳುಗುತ್ತವೆ, ಹಲವು ಪ್ರವಾಹದ ರಭಸದಲ್ಲಿ ಕೊಚ್ಚುತ್ತವೆ. ಆದರು ಕೆಲವು ತೇಲಿ ಸಾಗಿ ಗಮ್ಯ ತಲುಪಬಹುದು! ಈ ಆಶಾವಾದವೇ ಎಲ್ಲರನ್ನು ಬದುಕಿಸಿಟ್ಟಿರುವದು!
ಅಮಾವಾಸ್ಯೆ ಕಳೆದು ಹುಣ್ಣಿಮೆ ಬರಲಿ.
ಚೆಂದದ ಭೂಮಿಗೀತ!!

ನಾಗರಾಜ್ .ಕೆ (NRK) said...

ತುಂಬಾ ಚೆನ್ನಾಗಿದೆ :-)

Shashi jois said...

ಚೆನ್ನಾಗಿದೆ ಕವನ.